ಬಿಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ರಾಜೀನಾಮೆ

Prasthutha|

ಬಳ್ಳಾರಿ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ (BDCC) ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ಅವರು ರಾಜಿನಾಮೆ ಸಲ್ಲಿಸಿದ್ದಾರೆ.

- Advertisement -


ಬ್ಯಾಂಕಿನ ಶತಮಾನೋತ್ಸವ ಸಮಯದಲ್ಲಿ ಅಧ್ಯಕ್ಷ ಸ್ಥಾನ ವಹಿಸಿದ್ದ ಆನಂದ್ ಸಿಂಗ್ ಅವರು ರಾಜಿನಾಮೆ ಸಲ್ಲಿಸಿದ್ದು, ಸದ್ಯ ರಾಜಿನಾಮೆ ಪತ್ರ ಎಲ್ಲೆಡೆ ಹರಿದಾಡುತ್ತಿದೆ.


ವಿಧಾನಸಭಾ ಚುನಾವಣೆ ಬಳಿಕ ಯಾವುದೇ ಕಾರ್ಯಕ್ರಮಕ್ಕೂ ಆನಂದ್ ಸಿಂಗ್ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಬಿಡಿಸಿಸಿ ಬ್ಯಾಂಕ್ ಅಧಿಕಾರದ ಅವಧಿ ಇನ್ನೂ ಎರಡು ವರ್ಷಗಳ ಕಾಲ ಇದ್ದು, ಅವಧಿ ಮುನ್ನವೇ ರಾಜೀನಾಮೆ ನೀಡಿದ್ದು ಹಲವಾರು ಅನುಮಾನಕ್ಕೆ ಕಾರಣವಾಗಿದೆ.