ಶೂಟ್ ಮಾಡಿದರೂ, ಜೈಲಿಗೆ ಹಾಕಿದರೂ ನಾನು ಹೆದರುವುದಿಲ್ಲ; ಬಿಜೆಪಿ ವಿರುದ್ಧ ಸಂಜಯ್ ರಾವತ್ ಆಕ್ರೋಶ

Prasthutha|

- Advertisement -

ನವದೆಹಲಿ: ಶೂಟ್ ಮಾಡಿದರೂ, ಜೈಲಿಗೆ ಹಾಕಿದರೂ ನಾನು ಹೆದರುವುದಿಲ್ಲ ಎಂದು ಬಿಜೆಪಿ ವಿರುದ್ಧ ಶಿವಸೇನಾ ಸಂಸದ ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಜಯ್ ರಾವತ್ ಅವರ ಪತ್ನಿ ವರ್ಷಾ ಅವರಿಗೆ ಸೇರಿದ ಫ್ಲ್ಯಾಟ್ ಅನ್ನು ಕಾನೂನು ಜಾರಿ ನಿರ್ದೇಶನಾಲಯವು ವಶಪಡಿಸಿಕೊಂಡಿದೆ.

- Advertisement -

ಜತೆಗೆ ಅಲಿಬಾಗ್ ನಲ್ಲಿ ವರ್ಷಾ ಹಾಗೂ ಮತ್ತೊಬ್ಬ ಉದ್ಯಮಿಯ ಪತ್ನಿ ಜಂಟಿ ಒಡೆತನ ಹೊಂದಿರುವ 11 ಕೋಟಿ ರೂಪಾಯಿ ಮೌಲ್ಯದ ಎಂಟು ನಿವೇಶನಗಳನ್ನು ಕೂಡಾ ತಾತ್ಕಾಲಿಕವಾಗಿ ವಶಕ್ಕೆ ಪಡೆದಿದೆ.

ಸಂಜಯ್ ರಾವತ್ ಅವರ ಆಪ್ತ ಹಾಗೂ ಈಗ ನ್ಯಾಯಾಂಗ ಬಂಧನದಲ್ಲಿರುವ ಪ್ರವೀಣ್ ರಾವತ್, ಎಚ್ ಡಿ ಐ ಎಲ್ ನ ರಾಕೇಶ್ ವಧಾವಾನ್ ಅವರಿಂದ 100 ಕೋಟಿ ರೂಪಾಯಿ ಸ್ವೀಕರಿಸಿದ್ದಾರೆ ಎಂದೂ ನಿರ್ದೇಶನಾಲಯ ಆರೋಪಿಸಿದೆ.

ಸುಮಾರು ರೂ. 1,034 ಕೋಟಿ ರೂ. ಮೌಲ್ಯದ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಸಂಬಂಧಿಸಿದ ಕೆಲ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಇಂದು ಜಪ್ತಿ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಸರ್ಕಾರದ ಏಜೆನ್ಸಿಗಳು ನನ್ನ ಎಲ್ಲಾ ಆಸ್ತಿಯನ್ನು ವಶಪಡಿಸಿಕೊಂಡರೂ, ನನ್ನ ಶೂಟ್ ಮಾಡಿದರೂ, ಜೈಲಿಗೆ ಕಳುಹಿಸಿದರೂ ನಾನು ಹೆದರುವುದಿಲ್ಲ. ನಾನು ನಿಜವಾದ ಶಿವ ಸೈನಿಕ. ನನಗೆ ಸಂಬಂಧಿಸಿದ 1 ರೂ. ಕಪ್ಪು ಹಣ ಸಿಕ್ಕರೂ ನನ್ನ ಸಂಪೂರ್ಣ ಆಸ್ತಿಯನ್ನು ಬಿಜೆಪಿಗೆ ದಾನ ಮಾಡುತ್ತೇನೆ ಎಂದು ಹೇಳಿದ್ದಾರೆ.

ಯಾರು ಏನೇ ಹೇಳಿದರೂ, ನನ್ನ ವಿರುದ್ಧ ಏನೇ ಷಡ್ಯಂತ್ರ ರೂಪಿಸಿದರೂ ನಾನು ಹೆದರುವುದಿಲ್ಲ. ಕೊನೆಗೂ ಸತ್ಯವೇ ಮೇಲುಗೈ ಸಾಧಿಸುತ್ತದೆ. ನಾನು ಯಾವುದಕ್ಕೂ ಹೆದರುವವನಲ್ಲ, ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳುವುದಷ್ಟೇ ಅಲ್ಲ, ನನ್ನನ್ನು ಗುಂಡಿಕ್ಕಿ ಅಥವಾ ಜೈಲಿಗೆ ಕಳುಹಿಸಿದರೂ ನಾನು ಭಯ ಪಡುವುದಿಲ್ಲ. ಎಲ್ಲರ ವಿರುದ್ಧ ಹೋರಾಡಿ ನಾನು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.

Join Whatsapp