“ನನ್ನ ಆಯ್ಕೆಯನ್ನು ಮುಕ್ತವಾಗಿಟ್ಟಿದ್ದೇನೆ”; ಕಾಂಗ್ರೆಸ್ ನಡೆಗೆ ಬೇಸತ್ತು ಅಹ್ಮದ್ ಪಟೇಲ್ ಪುತ್ರನ ಟ್ವೀಟ್

Prasthutha|

ದೆಹಲಿ: ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ದಿವಂಗತ ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ವರಿಷ್ಠರಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದೇನೆ ಎಂದು ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

- Advertisement -

“ಕಾದು ಸುಸ್ತಾಗಿದ್ದೇನೆ. ಹಿರಿಯರಿಂದ ಯಾವುದೇ ಪ್ರೋತ್ಸಾಹವಿಲ್ಲ. ನನ್ನ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಂಡಿದ್ದೇನೆ” ಎಂದು ಫೈಸಲ್ ಮಂಗಳವಾರ ಟ್ವೀಟ್‌ ಮಾಡಿದ್ದಾರೆ.

https://twitter.com/mfaisalpatel/status/1511222961771999232?s=20&t=me8U17jTaAz60lh3R10vBA

ಈ ಹಿನ್ನೆಲೆಯಲ್ಲಿ ಫೈಸಲ್ ಅವರನ್ನು ಸಂಪರ್ಕಿಸಿದಾಗ, ಅವರು ಹೆಚ್ಚೇನೂ ಹೇಳಿಲ್ಲ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

- Advertisement -

ಗುಜರಾತ್‌ನಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆಯ ನಡೆಯಲಿದೆ.

Join Whatsapp