ಇ.ಡಿ ಮುಂದೆ ಇಂದು ಹಾಜರಾಗಲಿರುವ ಸಂಜಯ್ ರಾವುತ್

Prasthutha|

►ತನಿಖಾ ಸಂಸ್ಥೆಯ ಕಚೇರಿಯ ಹೊರಗೆ ಸೇರದಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ

- Advertisement -

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ 12 ಗಂಟೆಗೆ ಜಾರಿ ನಿರ್ದೇಶನಾಲಯ (ಇಡಿ) ಕಚೇರಿ ಮುಂದೆ ಹಾಜರಾಗುವುದಾಗಿ ಶಿವಸೇನಾ ನಾಯಕ ಸಂಜಯ್ ರಾವುತ್ ಶುಕ್ರವಾರ ಹೇಳಿದ್ದಾರೆ.

ನಾನು ಇಂದು ಮಧ್ಯಾಹ್ನ 12 ಗಂಟೆಗೆ ಇಡಿ ಮುಂದೆ ಹಾಜರಾಗಲಿದ್ದೇನೆ. ನನಗೆ ನೀಡಲಾದ ಸಮನ್ಸ್ ಅನ್ನು ನಾನು ಗೌರವಿಸುತ್ತೇನೆ ಮತ್ತು ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸುವುದು ನನ್ನ ಕರ್ತವ್ಯವಾಗಿದೆ. ಇಡಿ ಕಚೇರಿಯಲ್ಲಿ ಸೇರದಂತೆ ನಾನು ಶಿವಸೇನೆ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ಎಂದು ರಾವುತ್ ಟ್ವೀಟ್ ಮಾಡಿದ್ದಾರೆ.



Join Whatsapp