ಚಂಡೀಗಢ: ಶುಕ್ರವಾರದ ನಮಾಝನ್ನು ತೆರೆದ ಪ್ರದೇಶಗಳಲ್ಲಿ ನಡೆಸುವುದನ್ನು ವಿರೋಧಿಸಿರುವ ಸಂಘಪರಿವಾರ, ಹಿಂದೂ ಧರ್ಮಕ್ಕೆ ಮತಾಂತರವಾಗುವಂತೆ ಮುಸ್ಲಿಮರಿಗೆ ಕರೆ ನೀಡಿದೆ.
ಹರಿಯಾಣದಲ್ಲಿ ತೆರೆದ ಪ್ರದೇಶಗಳಲ್ಲಿ ಶುಕ್ರವಾರದ ನಮಾಝ್ ನಡೆಸಬಾರದೆಂದು ಸಂಘಪರಿವಾರ ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದು, ಹಿಂದೂ ಧರ್ಮಕ್ಕೆ ಮರು ಮತಾಂತರವಾಗಿ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಎಂದು ಸೂಚಿಸಿದೆ.
ಹರಿಯಾಣದ ಬಹುತೇಕ ಮುಸ್ಲಿಮರ ಪೂರ್ವಜರು ಹಿಂದೂಗಳು ಎಂದು ಹೆಳಿರುವ ಸಂಯುಕ್ತ್ ಸಂಘರ್ಷ ಸಮಿತಿಯ ಅಧ್ಯಕ್ಷ ಮಹಾವೀರ್ ಬಾರಧ್ವಾಜ್, ಹಿಂದೂ ಧರ್ಮಕ್ಕೆ ಮರು ಮತಾಂತರವಾಗಿ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಎಂದು ಕರೆ ನೀಡಿದ್ದಾರೆ. ಸಂಯುಕ್ತ್ ಸಂಘರ್ಷ ಸಮಿತಿಯು 32 ಹಿಂದುತ್ವ ಸಂಘಟನೆಗಳನ್ನೊಳಗೊಂಡ ಸಂಸ್ಥೆಯಾಗಿದೆ.
ಹರಿಯಾಣದಲ್ಲಿ ಮುಸ್ಲಿಮರು ತೆರೆದ ಪ್ರದೇಶಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಸಂಘಪರಿವಾರ ವಿರೋಧ ವ್ಯಕ್ತಪಡಿಸುತ್ತಾ ಬಂದಿವೆ. ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವಲ್ಲಿಗೆ ತೆರಳಿ ‘ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್’ ಘೋಷಣೆಗಳನ್ನು ಕೂಗಿ ವಿಕೃತಿ ಮೆರೆದ ಬಗ್ಗೆಯೂ ವರದಿಯಾಗಿತ್ತು.