ಗುಜರಾತ್ ನರಮೇಧ ಪುನರಾವರ್ತನೆಗೆ ಸಂಘಪರಿವಾರದ ಮುಖಂಡ ಕರೆ

Prasthutha|

ಕೋಟಾ: 2002 ರ ಗುಜರಾತ್ ನರಮೇಧವನ್ನು ಪುನರಾವರ್ತಿಸಲು ರಾಜಸ್ಥಾನದ ಸ್ಥಳೀಯ ಸಂಘಪರಿವಾರದ ಮುಖಂಡನೋರ್ವ ಆಗ್ರಹಿಸಿದ್ದಾನೆ.

- Advertisement -

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಾವು ನಿಮ್ಮನ್ನು ಒಬ್ಬೊಬ್ಬರಾಗಿ ಕೊಲ್ಲುತ್ತೇವೆ ಎಂಬುದಾಗಿ ನಾನು ಮುಸ್ಲಿಮರಿಗೆ ಹೇಳಲು ಬಯಸುತ್ತೇನೆ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಒಂದೋ ನೀವು ನಿಮ್ಮ ಪೂರ್ವಜರನ್ನು ನೆನಪಿಸಿಕೊಳ್ಳಿ ಮತ್ತು ಅವರು ಮಾಡಿದ ತಪ್ಪುಗಳನ್ನು ಸರಿಪಡಿಸಿ. ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸಿ ಅಥವಾ ಹಿಂದೂ ಸಮಾಜ ನಿಮ್ಮ ಕಡೆ ತಿರುಗಿ ಬೀಳುವ ದಿನ ನಿರೀಕ್ಷಿಸಿ. ನೀವೆಲ್ಲರೂ ಗುಜರಾತಿನ ಪರಿಸ್ಥಿತಿಯನ್ನು ನೋಡಿದ್ದೀರಿ. ಮುಸ್ಲಿಮರು ಮಾಡಿದ ಗೋಧ್ರಾ ಘಟನೆಯ ಫಲಿತಾಂಶ ಏನಾಯಿತು ಎಂದು ಮುಸ್ಲಿಮರು ನೋಡಿದ್ದಾರೆ. ನಾವು ನಿಮ್ಮನ್ನು ಒಬ್ಬೊಬ್ಬರಾಗಿ ಕೊಲ್ಲುತೇವೆ ಎಂದು ಮುಸ್ಲಿಮರ ಸಾಮೂಹಿಕ ನರಮೇಧಕ್ಕೆ ಕರೆ ನೀಡುತ್ತಿರುವುದು ಬಹಿರಂಗವಾಗಿದೆ.

- Advertisement -

ಸಂಘಪರಿವಾರದ ನಾಯಕ ಬಹಿರಂಗವಾಗಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿರುವುದು ನೆಟ್ಟಿಗರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.



Join Whatsapp