ಮಕ್ಕಳ ಎತ್ತರ ನೋಡಿ ಟಿಕೆಟ್; ಕೆಎಸ್ ಆರ್ ಟಿಸಿ ಯಿಂದ ಹೊಸ ನಿಯಮ ಜಾರಿ

Prasthutha|

➤ ಮೂರು ವರ್ಷದ ಪುಟಾಣಿಗೂ ಅರ್ಧ ಟಿಕೆಟ್ 

- Advertisement -

ಬೆಂಗಳೂರು: ಮಕ್ಕಳ ವಯಸ್ಸಿನ ಬದಲು ಎತ್ತರವನ್ನು ಆಧರಿಸಿ ಟಿಕೆಟ್ ಪಡೆದು ಪ್ರಯಾಣಿಸಬೇಕೆಂಬ ಹೊಸ ನಿಯಮವನ್ನು  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ) ಜಾರಿಗೆ ತಂದಿದೆ.

ಆರು ವರ್ಷ ಮೇಲ್ಪಟ್ಟಿದ್ದರೆ ಮಾತ್ರವಲ್ಲ,  ಈಗ ಮೂರು ವರ್ಷದ ಪುಟಾಣಿಗೂ ಅರ್ಧ ಟಿಕೆಟ್ ನೀಡಲಾಗುತ್ತಿದೆ. ಈ ಹಿಂದೆ ಬಸ್ಗಳಲ್ಲಿ ಆರು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣದ ವ್ಯವಸ್ಥೆಯಿತ್ತು. 6-12 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅರ್ಧ ಟಿಕೆಟ್ ನೀಡಲಾಗುತ್ತಿತ್ತು. ಆದರೆ ಈಗ ವಯಸ್ಸಿನ  ಬದಲಿಗೆ ಮಗುವಿನ ಎತ್ತರ ಆಧರಿಸಿ ಟಿಕೆಟ್ ನೀಡಲಾಗುತ್ತದೆ. ಮಗು ಮೂರು ಅಡಿ ಎತ್ತರವಿದ್ದು, ವಯಸ್ಸು ಇನ್ನೂ ಎರಡು ಅಥವಾ ಮೂರು ವರ್ಷವೇ ಆಗಿದ್ದರೂ ಅಂತಹ ಪೋಷಕ ಪ್ರಯಾಣಿಕರಿಂದ ಅರ್ಧ ಟಿಕೆಟ್ ನ  ಹಣ ಪಡೆದು ಟಿಕೆಟ್ ಕೊಡಲಾಗುತ್ತಿದೆ.

- Advertisement -

ಮಕ್ಕಳ ಎತ್ತರ ನೋಡಲು ಬಸ್ ನ ಮಧ್ಯದಲ್ಲಿರುವ ಕಂಬಗಳ ಮೇಲೆ ಎರಡು ಕಡೆ (3 ಅಡಿ, 4 ಅಡಿ) ಬಣ್ಣದಲ್ಲಿ ಗುರುತು ಮಾಡಲಾಗಿದೆ. ಯಾರು ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸುತ್ತಾರೋ ಅಂತಹವರ ಮಕ್ಕಳನ್ನು ಸರಳಿಗೆ ನಿಲ್ಲಿಸಿ, ಎತ್ತರ ನೋಡಿ ಟಿಕೆಟ್ ನೀಡಲಾಗುತ್ತಿದೆ.

ಇದು ಸಾಕಷ್ಟು ಬಡ ಪ್ರಯಾಣಿಕರಿಗೆ ಆರ್ಥಿಕವಾಗಿ ಹೊರೆಯಾಗಲಿದೆ. ಹತ್ತಿರದ ಊರುಗಳಿಗೆ ಪ್ರಯಾಣ ಬೆಳೆಸುವುದಾದರೆ ಪುಟಾಣಿ ಮಕ್ಕಳಿಗೆ ಟಿಕೆಟ್ ತೆಗೆದುಕೊಂಡರೂ ಹೊರೆಯಾಗುವುದಿಲ್ಲ. ಆದರೆ  ದೂರದ ಊರುಗಳಿಗೆ ಅದರಲ್ಲೂ ಸ್ಲೀಪರ್ ಕೋಚ್ಗಳಲ್ಲಿ ಟಿಕೆಟ್ ದರ ದುಪ್ಪಟ್ಟಾಗಿರುತ್ತದೆ. ಇಂತಹ ವೇಳೆ ಮಕ್ಕಳಿಗೆ ಅರ್ಧ ಟಿಕೆಟ್ ತೆಗೆದುಕೊಳ್ಳುವುದು ಹೊರೆಯಾಗುತ್ತದೆ.

Join Whatsapp