ಮುಸ್ಲಿಮ್ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸಂಘಪರಿವಾರದ ಕಾರ್ಯಕರ್ತರು

Prasthutha|

ಗದಗ: ಅಕ್ರಮವಾಗಿ ಗೋವುಗಳ ಸಾಗಾಣೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ಇಬ್ಬರು ಮುಸ್ಲಿಮ್ ಯುವಕರಿಗೆ ಸಂಘಪರಿವಾರದ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನರಗುಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

- Advertisement -

ಜಾನುವಾರು ಸಂತೆಗೆಂದು ರೈತರ ವಾಹನದಲ್ಲಿ ಮುಹಮ್ಮದ್ ಗೌಸ್ ಮತ್ತು ಅಶ್ಫಾಕ್ ಎಂಬವರು ಗೋವುಗಳನ್ನು ಸಾಗಾಟ ಮಾಡುತ್ತಿದ್ದರು. ಗೋವುಗಳು ಮಾರಾಟ ಆಗದ ಕಾರಣ ಮತ್ತೆ ವಾಪಸ್ ನರಗುಂದಕ್ಕೆ ತರುತ್ತಿದ್ದರು. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಸಂಘಪರಿವಾರದ ಕಾರ್ಯಕರ್ತರು ವಾಹನ ತಡೆದು ಅವರ ಗಂಭೀರ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಬಸವರಾಜ, ಮಲ್ಲಿಕಾರ್ಜುನ, ಶರಣಪ್ಪ, ಅಜಯ ಅಣ್ಣಿಗೇರಿ, ದೇವರಾಜ ಕಮ್ಮಾರ ಹಾಗೂ ಇತರ 20 ಮಂದಿ ಹಲ್ಲೆ ನಡೆಸಿರುವುದಾಗಿ ಸಂತ್ರಸ್ತರು ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

ಹಲ್ಲೆಗೊಳಗಾದ ಯುವಕರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ನರಗುಂದ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇನ್ನು ನರಗುಂದ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಇಬ್ಬರು ಡಿವೈಎಸ್​ಪಿ ನೇತೃತ್ವದಲ್ಲಿ ಎರಡು ಡಿಆರ್ ತುಕಡಿ ಸೇರಿದಂತೆ 150 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Join Whatsapp