ಜೈಲಿನಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಬಂಧನ

Prasthutha|

ರಾಯಚೂರು: ಜಿಲ್ಲೆಯ ದೇವದುರ್ಗ ಉಪಕಾರಾಗೃಹ ಗೋಡೆ ಹಾರಿ ಪರಾರಿಯಾಗಿದ್ದ ವಿಚಾರಣಾಧೀನ ಕೈದಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಕೊಲೆ ಪ್ರಕರಣದ ಮೇಲೆ ಜೈಲು ಸೇರಿದ್ದ ಆರೋಪಿ ಅನ್ವರ್ ಬಾಷಾ ಸೆಪ್ಟೆಂಬರ್ 3 ರಂದು ಉಪ ಕಾರಾಗೃಹದಿಂದ ಪರಾರಿಯಾಗಿದ್ದ. ನ್ಯಾಯಾಲಯಕ್ಕೆ ಪ್ರಕರಣ ವಿಚಾರಣೆ ವೇಳೆ ಹಾಜರಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ನ್ಯಾಯಾಲಯಕ್ಕೆ ಬರುವ ಸಾಧ್ಯತೆ ಹಿನ್ನೆಲೆ ಕಣ್ಣಿಟ್ಟಿದ್ದ ಪೊಲೀಸರು ನ್ಯಾಯಾಧೀಶರ ಅನುಮತಿ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಅನ್ವರ್ ಬಾಷಾ ದೇವದುರ್ಗದ ಮಸಿಹಾಳ ಗ್ರಾಮದ ಲಾಲಾ ಸಾಬ್ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿದ್ದಾನೆ. ಗಬ್ಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಆರೋಪಿ ಈಗ ಪುನಃ ಜೈಲು ಸೇರಿದ್ದಾನೆ.

Join Whatsapp