ಉಜಿರೆ ಬಸ್ ನಿಲ್ದಾಣದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಸಂಘಪರಿವಾರದ ಕಾರ್ಯಕರ್ತರು: SDPI ಖಂಡನೆ

Prasthutha|

ಬೆಳ್ತಂಗಡಿ: ಉಜಿರೆ ಬಸ್ ನಿಲ್ದಾಣದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಸಂಘಪರಿವಾರದ ಕಾರ್ಯಕರ್ತರ ಕೃತ್ಯವನ್ನು ಸೊಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತೀವ್ರವಾಗಿ ಖಂಡಿಸಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ SDPI ಪಕ್ಷದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ನವಾಝ್ ಕಟ್ಟೆ, ಉಜಿರೆ ಬಸ್ ನಿಲ್ದಾಣದಲ್ಲಿ ಸುಳ್ಳು ಆರೋಪ ಮಾಡಿ ರಿಕ್ಷಾ ಚಾಲಕರು ಮತ್ತು ಕೆಲವು ಸಂಘಪರಿವಾರದ ಕಾರ್ಯಕರ್ತರು ಯುವಕನ ಮೇಲೆ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಘಪರಿವಾರಕ್ಕೆ ಒಂದೇ ಸಮುದಾಯವನ್ನು ಗುರಿಪಡಿಸಿ ಈ ರೀತಿಯ ಅನೈತಿಕ ಪೊಲೀಸ್ ಗಿರಿ ಮತ್ತು ಹಲ್ಲೆಗಳು ನಡೆಸುವುದು ಚಾಳಿಯಾಗಿ ಬಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲ್ಲೆ ಪ್ರಕ್ರಿಯೆಗಳು ಮರುಕಳಿಸಿದೆ. ಇಂತಹಾ ಘಟನೆಗಳಿಗೆ ಜಿಲ್ಲೆಯ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

- Advertisement -

ಪ್ರಸ್ತುತ ಘಟನೆಯನ್ನು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ, ಹಲ್ಲೆ ಮಾಡಿದ ಮತ್ತು ಮಾಡಿಸಿದ ಪ್ರತಿಯೊಬ್ಬರನ್ನೂ ಗುರುತು ಹಚ್ಚಿ, ಸುಮೋಟೋ ಪ್ರಕರಣವನ್ನು ದಾಖಲಿಸುವ ಮೂಲಕ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ನವಾಝ್ ಕಟ್ಟೆ ಆಗ್ರಹಿಸಿದ್ದಾರೆ.

Join Whatsapp