ಇದ್ರಿಸ್ ಖಾನ್ ಕೊಲೆ ಪ್ರಕರಣ| ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಜಮೆತುಲ್ಲಾ ಸಂಘಟನೆ ಆಗ್ರಹ

Prasthutha|

- Advertisement -

ಬೆಂಗಳೂರು: ಕನಕಪುರ ಮೂಲದ ಇದ್ರಿಸ್ ಖಾನ್ ಎಂಬ ಮುಸ್ಲಿಂ ಯುವಕನನ್ನು ಹಿಂದುತ್ವ ಗೋರಕ್ಷಕರು ಹಿಂಸೆ ನೀಡಿ ಕೊಲೆಗೈದ ಪ್ರಕರಣವನ್ನು ಸೂಕ್ತ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ನೀಡಬೇಕೆಂದು ಕರ್ನಾಟಕ ಯುವ ಜಮೆತುಲ್ಲಾ ಖೊರೆಷ ಸಂಘಟನೆ ಆಗ್ರಹಿಸಿದೆ.

ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಕಾನೂನು ಸಲಹೆಗಾರ, ಹಿರಿಯ ವಕೀಲ ಸಿರಾಜುದ್ದೀನ್ ಅಹಮದ್, ಇದ್ರಿಸ್ ಖಾನ್ ಕೊಲೆ ಪ್ರಕರಣದ ಹಿಂದೆ ರಾಜ್ಯ ಸರ್ಕಾರದ ಸಂಪೂರ್ಣ ಕುಮ್ಮಕ್ಕಿದೆ. ರಾಷ್ಟ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಸೇರಿದಂತೆ ಅವರ ಗುಂಪುಗಳಿಗೆ ಗೋ ಸಾಗಿಸುವ ವಾಹನಗಳನ್ನು ಹಿಡಿಯುವ ಅಧಿಕಾರ ಕೊಟ್ಟವರ್ಯಾರು? ಗೂಂಡಾಗಳ ರೀತಿಯಲ್ಲಿ ವಾಹನಗಳನ್ನು ಅಡಗಟ್ಟಿ ವಾಹನ ಚಾಲಕ ಮತ್ತು ಸಂಗಡಿಗರಿಗೆ ಹಿಂಸೆ ನೀಡುವುದು ಸರಿಯಲ್ಲ. ಕಾನೂನು ಪ್ರಕಾರ ಸಂಬಂಧಿಸಿದ ಪೋಲಿಸ್ ಇಲಾಖೆ, ಪಶುಸಂಗೋಪನೆ ಇಲಾಖೆ ಪರಿಶೀಲನೆ ನಡೆಸಿ ಗೋ ನಿಷೇದ ಕಾಯ್ದೆ ಪ್ರಕಾರ ಶಿಕ್ಷೆ ನೀಡಲಿದೆ. ರಾಜ್ಯ ಸರ್ಕಾರ ಗೋ, ಧನ ಸಾಗಣೆ ಮಾಡುವ ವಾಹನಗಳ ಮೇಲೆ ಆಕ್ರಮವಾಗಿ ದಾಳಿ ಮಾಡುವ ಹಿಂದೂ ಸಂಘಟಗಳಿಗೆ ಕುಮುಕ್ಕು ನೀಡುತ್ತಿದೆ. ಈ ಕಾರಣದಿಂದ ಸಮಾಜದಲ್ಲಿ ಅಶಾಂತಿ, ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಇಂತಹವರ ವಿರುದ್ದ ರಾಜ್ಯ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

- Advertisement -

ರಾಜ್ಯದ ಎಲ್ಲ ಗಡಿ ಪ್ರದೇಶದಲ್ಲಿ ಹಿಂದುತ್ವದ ರಕ್ಷಣೆಯ ಹೆಸರಿನ ಅನೇಕ ಸಂಘಟನೆಗಳು, ಪುನೀತ್ ಕೆರೆಹಳ್ಳಿಯಂತ ಕೆಲ ಗೂಂಡಾಗಳು ಗೋರಕ್ಷಣೆ ಹೆಸರಿನಲ್ಲಿ ಬಹುದೊಡ್ಡ ದಂದೆಯನ್ನಾಗಿ ಮಾಡಿಕೊಂಡಿದ್ದಾರೆ. ಪೋಲಿಸ್ ಇಲಾಖೆ ಮಾಡುವ ಕೆಲಸವನ್ನು ಇವರು ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದರು.

ಸಂಘಟನೆಯ ಅಧ್ಯಕ್ಷ ಉಮರ್ ಕೈಸರ್ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಕೇವಲ ಗೋ ಸಾಗಣೆ ಮಾಡುವವರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಆದರೆ ಗೋವುಗಳನ್ನು ಮಾರಾಟ ಮಾಡುವ ರೈತರ ಮೇಲೂ ಪ್ರಕರಣ ದಾಖಲಿಸ ಬೇಕು. ಕಸಾಯಿ ಖಾನೆಗಾಗಿ ಗೋವುಗಳನ್ನು ಮಾರಾಟ ಮಾಡುವುದು ಕೂಡ ತಪ್ಪು ಎಂದು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಉಮರ್ ಅರಾಫತ್ ಖುರೇಷಿ, ಸೈಯದ್ ಮುಜಾ ಅಹಮದ್, ಸುಹೇಲ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp