ಸಮೀರ್ ಶಹಾಪುರ ಹತ್ಯೆ ಪ್ರಕರಣ: ಬಜರಂಗದಳದ ಜಿಲ್ಲಾ ಸಂಚಾಲಕ ಬಂಧನ

Prasthutha|

ನರಗುಂದ: ಸಮೀರ್ ಶಹಾಪುರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಗದಗ ಜಿಲ್ಲಾ ಬಜರಂಗ ದಳದ ಸಂಚಾಲಕ ಬಸವರಾಜ್ ಗಡೇಕರ್ ಎಂಬಾತನನ್ನು ನರಗುಂದ ಪೊಲೀಸರು ಕಳೆದ ರಾತ್ರಿ ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಇದುವರೆಗೆ ಬಂಧಿತರಾದವರ ಸಂಖ್ಯೆ 6ಕ್ಕೇರಿದೆ.

- Advertisement -

 ಜನವರಿ 17ರಂದು ರಾತ್ರಿ  ನರಗುಂದಲ್ಲಿರುವ ತನ್ನ ಹೋಟೆಲ್ ಬಂದ್ ಮಾಡಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ನರಗುಂದ ನಿವಾಸಿ ಸಮೀರ್ ಶಹಾಪುರ (19) ಹಾಗೂ ಆತನ ಸ್ನೇಹಿತ ಸಂಶೀರ್  ಅವರ ಮೇಲೆ ಬಜರಂಗದಳದ ಕಾರ್ಯಕರ್ತರು ಮಾರಕಾಯುಧಗಳಿಂದ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಮೀರ್ ಶಹಾಪುರ ಮರುದಿನ ಬೆಳಗ್ಗೆ ಮೃತಪಟ್ಟಿದ್ದರು.  ಸಂಶೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ನರಗುಂದ ಪೊಲೀಸರು ಬಜರಂಗದಳದ ಐವರು ಕಾರ್ಯಕರ್ತರಾದ ನರಗುಂದ ಸಿದ್ದನಬಾವಿ ನಿವಾಸಿ ಮಲ್ಲಿಕಾರ್ಜುನ ಹಿರೇಮಠ ಅಲಿಯಾಸ್ ಗುಂಡ್ಯಾ (20), ಸಿದ್ದನಬಾವಿ ಓಣಿಯ ನಿವಾಸಿ ಚನ್ನಬಸಪ್ಪ ಅಕ್ಕಿ ಅಲಿಯಾಸ್ ಚನ್ನಪ್ಪ (19), ನರಗುಂದ ವಾಸವಿ ಕಲ್ಯಾಣ ಮಂಟಪ ಹತ್ತಿರದ ನಿವಾಸಿ ಸಕ್ರಪ್ಪ ಕಾಕನೂರ (19) ಹಾಗೂ ಸುಬೇದಾರ್ ಓಣಿಯ ನಿವಾಸಿ ಸಂಜು ನಲವಡಿ (35) ಎಂಬವರನ್ನು ಬಂಧಿಸಲಾಗಿತ್ತು.  

- Advertisement -

ಇದೀಗ ಗದಗ ಜಿಲ್ಲಾ ಬಜರಂಗದಳದ ಸಂಚಾಲಕ ಬಸವರಾಜ್ ಗಡೇಕರ್ ನನ್ನು ಬಂಧಿಸಿದ್ದಾರೆ.



Join Whatsapp