ಸಮೀರ್ ಶಹಾಪುರ ಹತ್ಯೆ: ಪ್ರಮುಖ ಆರೋಪಿ RSS ಮುಖಂಡನಿಗೆ ಜಾಮೀನು

Prasthutha|

ನರಗುಂದ: ಸಮೀರ್ ಶಹಾಪುರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಆರೆಸ್ಸೆಸ್ ಮುಖಂಡ ಸಂಜು ನಲವಡೆಗೆ ನ್ಯಾಯಾಲಯ ಜಾಮೀನು ನೀಡಿದೆ.

- Advertisement -


ಜನವರಿ 17ರಂದು ರಾತ್ರಿ ನರಗುಂದಲ್ಲಿರುವ ತನ್ನ ಹೋಟೆಲ್ ಬಂದ್ ಮಾಡಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ನರಗುಂದ ನಿವಾಸಿ ಸಮೀರ್ ಶಹಾಪುರ (19) ಹಾಗೂ ಆತನ ಸ್ನೇಹಿತ ಸಂಶೀರ್ ಅವರ ಮೇಲೆ ಬಜರಂಗದಳದ ಕಾರ್ಯಕರ್ತರು ಮಾರಕಾಯುಧಗಳಿಂದ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಮೀರ್ ಶಹಾಪುರ ಮರುದಿನ ಬೆಳಗ್ಗೆ ಮೃತಪಟ್ಟಿದ್ದರು.


ಪ್ರಕರಣಕ್ಕೆ ಸಂಬಂಧಿಸಿ ನರಗುಂದ ಪೊಲೀಸರು ಬಜರಂಗದಳದ ಐವರು ಕಾರ್ಯಕರ್ತರಾದ ನರಗುಂದ ಸಿದ್ದನಬಾವಿ ನಿವಾಸಿ ಮಲ್ಲಿಕಾರ್ಜುನ ಹಿರೇಮಠ ಅಲಿಯಾಸ್ ಗುಂಡ್ಯಾ (20), ಸಿದ್ದನಬಾವಿ ಓಣಿಯ ನಿವಾಸಿ ಚನ್ನಬಸಪ್ಪ ಅಕ್ಕಿ ಅಲಿಯಾಸ್ ಚನ್ನಪ್ಪ (19), ನರಗುಂದ ವಾಸವಿ ಕಲ್ಯಾಣ ಮಂಟಪ ಹತ್ತಿರದ ನಿವಾಸಿ ಸಕ್ರಪ್ಪ ಕಾಕನೂರ (19) ಹಾಗೂ ಸುಬೇದಾರ್ ಓಣಿಯ ನಿವಾಸಿ ಸಂಜು ನಲವಡಿ (35) ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಿದ್ದರು.

- Advertisement -


ಈ ಪೈಕಿ ಇಬ್ಬರಿಗೆ ಕೊಲೆಯಾದ ಎರಡೇ ತಿಂಗಳಲ್ಲಿ ಜಾಮೀನು ದೊರೆತಿತ್ತು. ಉಳಿದ ಆರು ಮಂದಿ ಜೈಲಿನಲ್ಲಿದ್ದರು. ಇದೀಗ ಈ ಪೈಕಿ ಸಂಜು ನಲವಡೆಗೆ ಧಾರವಾಡ ಹೈಕೋರ್ಟ್ ಇಂದು ಜಾಮೀನು ನೀಡಿದೆ.

Join Whatsapp