ಸಲಿಂಗ ವಿವಾಹ: ಸಂಸತ್’ನ ವ್ಯಾಪ್ತಿಗೆ ಬಿಟ್ಟ ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ಸಲಿಂಗ ವಿವಾಹದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದೆ. ಇದು ಸಂಸತ್ತಿನ ವ್ಯಾಪ್ತಿಗೆ ಒಳಪಡುವ ವಿಚಾರ ಎಂದು ಸಿಜೆಐ ಡಿವೈ ಚಂದ್ರಚೂಡ್ ಹೇಳಿದ್ದಾರೆ.

- Advertisement -

ಸಲಿಂಗ ವಿವಾಹ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ತೀರ್ಮಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದಾರೆ.


ಹೊಸ ಸಾಮಾಜಿಕ ಸಂಸ್ಥೆಯನ್ನು ರಚಿಸುವುದು ಅವರ ಸೂಚನೆಗಳ ಉದ್ದೇಶವಲ್ಲ. ಈ ನ್ಯಾಯಾಲಯವು ಕೇವಲ ಆದೇಶದ ಮೂಲಕ ಸಮುದಾಯಕ್ಕೆ ಆಧಾರವನ್ನು ಸೃಷ್ಟಿಸುತ್ತಿಲ್ಲ. ಆದರೆ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಗುರುತಿಸುತ್ತಿದೆ. ಲಿವ್-ಇನ್ ಸಂಬಂಧದಲ್ಲಿ ಪ್ರತ್ಯೇಕತೆಗಿಂತ ವಿವಾಹಿತ ಸಂಗಾತಿಯಿಂದ ಬೇರ್ಪಡಿಕೆ ಹೆಚ್ಚು ಕಷ್ಟಕರವಾಗಿದೆ ಎಂಬುದು ನಿಜ ಅಂತಾ ಮುಖ್ಯ ನ್ಯಾಯಮೂರ್ತಿ ಧನಂಜಯ್ ಯಶವಂತ್ ಚಂದ್ರಚೂಡ್ ಹೇಳಿದರು.

Join Whatsapp