ಸಿ ಎಂ ಇಬ್ರಾಹಿಂ ಜೆಡಿಎಸ್ ನಲ್ಲಿ ಲೆಕ್ಕಕ್ಕೇ ಇಲ್ಲ: ಆರ್. ಅಶೋಕ್

Prasthutha|

ಬೆಂಗಳೂರು: ನಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಸಿ ಎಂ ಇಬ್ರಾಹಿಂ ಹೇಳಿದ್ದಾರೆ. ಆದರೆ, ಜೆಡಿಎಸ್ ಅಂದರೆ ಅದು ದೇವೇಗೌಡರು. ಸಿಎಂ ಇಬ್ರಾಹಿಂ ಜೆಡಿಎಸ್ ನಲ್ಲಿ ಲೆಕ್ಕಕ್ಕೆ ಇಲ್ಲ ಎಂದು ಹೊಸ ಮಿತ್ರಪಕ್ಷ ಜೆಡಿಎಸ್ ಪರ ಮಾಜಿ ಸಚಿವ ಆರ್ ಅಶೋಕ್ ವಕಾಲತ್ತು ವಹಿಸಿದ್ದಾರೆ.

- Advertisement -


ಫ್ರೀಡಂ ಪಾರ್ಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದೇ ಒರಿಜಿನಲ್ ಜೆಡಿಎಸ್ ಎಂಬ ಸಿ ಎಂ ಇಬ್ರಾಹಿಂ ಹೇಳಿಕೆಗೆ ಅಪಹಾಸ್ಯದಿಂದ ನಗುತ್ತಾ ಜೆಡಿಎಸ್ ನಲ್ಲಿ ಸಿ ಎಂ ಇಬ್ರಾಹಿಂ ಅವರು ಬರೀ ನಾಮಕೇವಾಸ್ತೆ ಅಷ್ಟೇ. ಅವರ ಮಾತನ್ನು ಯಾರೂ ಕೇಳುವುದಿಲ್ಲ. ಜೆಡಿಎಸ್ ಅಂದರೆ ಅದು ದೇವೇಗೌಡರು. ಇದು ಇಡೀ ದೇಶಕ್ಕೆ, ರಾಜ್ಯಕ್ಕೇ ಗೊತ್ತಿದೆ. ಸಿಎಂ ಇಬ್ರಾಹಿಂ ಜೆಡಿಎಸ್ ನಲ್ಲಿ ಲೆಕ್ಕಕ್ಕೇ ಇಲ್ಲದಿರುವಾಗ ಇಬ್ರಾಹಿಂ ಯಾರನ್ನೂ ಅಮಾನತು ಮಾಡಲು ಆಗುವುದಿಲ್ಲ. ಅಮಾನತು ಮಾಡಲು ಕಾರ್ಯಕಾರಿ ಸಮಿತಿ ಅನುಮತಿ ಬೇಕು. ಜೆಡಿಎಸ್ ಕಾರ್ಯಕಾರಿ ಸಮಿತಿ ಜೆಪಿ ಭವನದಲ್ಲಿದೆ ಎಂದರು