ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಬೈಕ್‌ ನಲ್ಲಿ ಟ್ರಿಪಲ್ ರೈಡ್‌ ಗೆ ಅವಕಾಶ ನೀಡುವುದಾಗಿ ಘೋಷಿಸಿದ ಪಕ್ಷ!

Prasthutha|

- Advertisement -

ಲಖನೌ: ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಬೈಕ್‌ನಲ್ಲಿ ಮೂವರನ್ನು ಕೂರಿಸಿಕೊಂಡು ಹೋಗಲು ಅವಕಾಶ ನೀಡುತ್ತೇವೆ ಎಂದು ಸಮಾಜವಾದಿ ಪಕ್ಷದ ಮಿತ್ರಪಕ್ಷ ಸುಹೇಲ್‌ದೇವ್ ಭಾರತೀಯ ಸಮಾಜ್ ಪಾರ್ಟಿ (ಎಸ್‌ಬಿಎಸ್‌ಪಿ) ಹೇಳಿದೆ.

ಈ ಕುರಿತು ಹೇಳಿಕೆ ನೀಡಿರುವ ಎಸ್‌ಬಿಎಸ್‌ಪಿ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್, ಉತ್ತರ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ಜನರಿಗೆ ಬೈಕ್‌ನಲ್ಲಿ ಮೂವರು ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

- Advertisement -

ಅಲ್ಲದೆ, ಆಟೊರಿಕ್ಷಾ ಮತ್ತು ಟೆಂಪೊದಲ್ಲಿ ಕೂಡ ನಿಗದಿತ ಮಿತಿಗಿಂತ ಹೆಚ್ಚಿನ ಜನರು ಸಂಚರಿಸಬಹುದು, ಅದಕ್ಕೆ ದಂಡ ವಿಧಿಸುವುದಿಲ್ಲ ಎಂದು ರಾಜ್‌ಭರ್ ಹೇಳಿದ್ದಾರೆ.

ಉತ್ತರ ಪ್ರದೇಶದ ಮಾಜಿ ಸಚಿವರಾಗಿರುವ ರಾಜ್‌ಭರ್ ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದಾರೆ.



Join Whatsapp