ಹೈದರಾಬಾದ್: ಕುತುಬ್ ಶಾಹಿ ಮಸ್ಜಿದ್ ಧ್ವಂಸ; AIMIM ನಿಂದ ಪ್ರತಿಭಟನೆ

Prasthutha|

ಹೈದಾರಾಬಾದ್: ತೆಲಂಗಾಣದ ಯಾಕುತ್ ಪುರ ಗ್ರಾಮದಲ್ಲಿ 400 ವರ್ಷಗಳಷ್ಟು ಪುರಾತನವಾದ ಕುತುಬ್ ಶಾಹಿ ಮಸೀದಿಯನ್ನು ಕೆಡವಿದನ್ನು ವಿರೋಧಿಸಿ AIMIM ಕಾರ್ಯಕರ್ತರು ರಾಜ್ಯ ವಕ್ಫ್ ಮಂಡಳಿ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದರು.

- Advertisement -

ವಕ್ಫ್ ಮಂಡಳಿಯ ನಿರ್ಲಕ್ಷ ಧೋರಣೆಯೇ ಮಸ್ಜಿದ್ ಕೆಡವಲು ಪ್ರಮುಖ ಕಾರಣವೆಂದು AIMIM ಆರೋಪಿಸಿದೆ.

ಚಿಂತಲಪಲ್ಲಿ ಮಂಡಲದಲ್ಲಿರುವ ಮಸೀದಿಯನ್ನು ಅಲ್ವಾಲ್ ನ ವಿನೋದ ರೆಡ್ಡಿ ಎಂಬಾತ ಧ್ವಂಸಗೊಳಿಸಿದ್ದನು ಎಂದು ಹೇಳಲಾಗಿದೆ.

- Advertisement -

ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಕ್ಫ್ ಬೋರ್ಡ್ ಅಧ್ಯಕ್ಷ ಮುಹಮ್ಮದ್ ಸಲೀಮ್ ಮಸೀದಿಯಲ್ಲಿ ಅಸರ್ ನಮಾಝ್ ನಿರ್ವಹಿಸಿದ ಬಳಿಕ ವಿನೋದ್ ರೆಡ್ಡಿ ವಿರುದ್ಧ ಶಾಮೀರ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
2011 ರಲ್ಲಿ ಮೀರ್ ಗುಲಾಮ್ ಹಸನ್ ಖಾನ್ ಮತ್ತು ಅವರ ಮಗ ಮುಹಮ್ಮದ್ ಶಹನವಾಝ್ ಅವರು ಮಸೀದಿ ಮತ್ತು ಕಬರ್ ಸ್ಥಾನದ 9 ಎಕ್ರೆ ಜಾಗವನ್ನು ಸತ್ಯನಾರಾಯಣ ರೆಡ್ಡಿಗೆ ಮಾರಾಟ ಮಾಡಿದ್ದರು. ಆ ಬಳಿಕ ಅದನ್ನು ವಿನೋದ್ ರೆಡ್ಡಿಗೆ ಮತ್ತೆ ಮಾರಾಟ ಮಾಡಲಾಗಿತ್ತು.

Join Whatsapp