ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕಾರ್ಪೋರೇಟ್ ಸ್ನೇಹಿತರನ್ನು ಉದ್ದಾರ ಮಾಡಲು ಹಾಗೂ ತಮ್ಮ ಧಣಿಗಳ ಆದೇಶ ಪಾಲಿಸುತ್ತಾ ತಂದಿದ್ದ ರೈತ ವಿರೋಧಿ ಕಾನೂನಿನ ವಿರುದ್ಧ ಮಾಡಿದ ಹೋರಾಟಕ್ಕೆ ಜಯ ಸಿಕ್ಕಿದೆ. ಕೇಂದ್ರ ಸರ್ಕಾರ ಈಗ ಕೃಷಿ ಕಾಯ್ದೆ ವಾಪಸ್ ಪಡೆದಿದೆ. ಇದು ಪ್ರಜಾಪ್ರಭುತ್ವ ಗೆಲುವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಸರ್ವಾಧಿಕಾರಿ ಧೋರಣೆಯಿಂದ ಜಾರಿಗೆ ತಂದ್ದ ಕಾಯ್ದೆ ವಿರುದ್ಧ ಹೋರಾಟ ಮಾಡಿ ಸುಮಾರು 700 ಕ್ಕಿಂತ ಹೆಚ್ಚಲು ಮಂದಿ ರೈತರು ಹುತಾತ್ಮರಾದರು. ಅಹಂ ಬ್ರಹ್ಮಾಸ್ಮಿ ಎಂದು ಪ್ರಧಾನಿ ಎಂದು ತಿಳಿದು ಅನೇಕ ಕಾನೂನೂ ಜಾರಿಗೆ ತಂದ್ದರು. ತಾವು ಮಾಡಿದ್ದೇ ಸರಿಯೆಂಬ ದಾಟಿಯಲ್ಲಿದ್ದರು. ರೈತರ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಇವರು ಚುನಾವಣೆ ದೃಷ್ಟಿಯಿಂದ ಕಾಯ್ದೆ ಹಿಂಪಡೆದಿದ್ದಾರೆ.
ಚುನಾವಣೆಯಲ್ಲಿ ಸೋತಿದ್ದಕ್ಕೆ ತೈಲಬೆಲೆ ಕಡಿಮೆ ಮಾಡಿದ್ದರು. ತೈಲ ಬೆಲೆಯನನು ಇನ್ನೂ ಕಡಿಮೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲೀಂ ಅಹ್ಮದ್ ಒತ್ತಾಯ ಮಾಡಿದರು.
ಈ ಕರಾಳ ಕಾಯ್ದೆಯಿಂದ ಹುತಾತ್ಮರಾದ ರೈತ ಕುಟುಂಬಗಳಿಗೆ 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಮಾಡಿದರು.ರೈತ ವಿರೋಧಿ ಕಾಯ್ದೆ ಹಿಂಪಡೆದ ವಿಚಾರವಾಗಿ ಪಕ್ಷವು ಕಿಸಾನ್ ವಿಜಯ ದಿವಸ್ ಅನ್ನು ರಾಜ್ಯದಾದ್ಯಂತ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಕಂಟ್ರಾಕ್ಟರ್ಸ್ 40% ಕಮೀಷನ್ ದೂರು ವಿಚಾರ ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತ ಪತ್ರ ಬರೆದದ್ದನ್ನ ನಾವು ನೋಡಿಲ್ಲ. ಪ್ರೈಮಿನಿಸ್ಟರ್ ಗೆ ಪತ್ರವನ್ನು ಬರೆಯುತ್ತಾರೆ. 40 % ನಮ್ಮಿಂದ ಪರ್ಸೇಂಟೇಜ್ ಪಡೆಯುತ್ತಾರೆಂಬ ಪತ್ರ. ಗುತ್ತಿಗೆದಾರರು ಪತ್ರ ಬರೆಯುತ್ತಾರೆ ಅಂದರೆ ಹೇಗೆ? ಈ ವಿಚಾರವಾಗಿ ಇವತ್ತು ಜನರ ಮುಂದೆ ರಾಜ್ಯ ಬಿಜೆಪಿ ಸರ್ಕಾರ ಬೆತ್ತಲಾಗಿದೆ. ಇದಕ್ಕೆ ಪ್ರಧಾನಿಯವರೇ ಉತ್ತರವನ್ನ ಕೊಡಬೇಕು. ಹಿಂದೆ ನೀರಾವರಿ ಟೆಂಡರ್ ನಲ್ಲಿ ಆರೋಪ. ಆ ಆರೋಪಕ್ಕೂ ಈ ಆರೋಪಕ್ಕೆ ತಾಳೆ ಯಾಗ್ತಿದೆ. ಬೆಂಕಿ ಯಿಲ್ಲದೆ ಹೊಗೆ ಕಾಣಲ್ಲ ಇದಕ್ಕೆ ಪ್ರಧಾನಿಯವರೇ ಉತ್ತರ ಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಒತ್ತಾಯ ಮಾಡಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆ ತಂದರು. ಪಾರ್ಲಿಮೆಂಟ್, ವಿಧಾನಸಭೆಯಲ್ಲಿ ಚರ್ಚೆಯಾಗದೆ ಕಾನೂನು ತರಲಾಗಿತ್ತು. ಎಲ್ಲವನ್ನೂ ಸುಗ್ರೀವಾಜ್ಞೆ ಮೂಲಕ ಕಾಯ್ದೆ ತರುತ್ತಿದ್ದಾರೆ. ನಾವು ಮಾಡಿದ್ದೇ ಸರಿ ಎಂದು ಹೇಳುತ್ತಾರೆ. ರಾಜ್ಯಗಳ ಮೇಲೂ ಬಲವಂತ ಹೇರ್ತಾರೆ.ರೈತರು ಕಾಯ್ದೆ ವಿರುದ್ಧ ತಿರುಗಿಬಿದ್ದರು.
700 ರೈತರು ಪ್ರಾಣ ಕಳೆದುಕೊಂಡಿದ್ದರು. ಕರಾಳ ಮಸೂದೆ ವಾಪಸ್ ಗೆ ಆಗ್ರಹಿಸಿ ಹೋರಾಡಿದ್ದರು. ಕಾಂಗ್ರೆಸ್ ಕೂಡ ತೀರ್ವವಾಗಿ ವಿರೋಧಿಸಿತು. ಇದರ ಫಲವಾಗಿ ಈಗ ಕಾಯ್ದೆ ಹಿಂಪಡೆದಿದೆ. ಒಂದು ವರ್ಷದ ಹೋರಾಟದ ನಂತರ ಹಿಂಪಡೆದಿದ್ದಾರೆ. ಕೇಂದ್ರಕ್ಕೆ ಜ್ನಾನೋದಯವಾಗಿ ಹಿಂತೆಗೆದುಕೊಂಡಿಲ್ಲ.ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹಿಂಪಡೆದಿದ್ದಾರೆ. ರೈತರ ಮುಂದೆ ಕೊನೆಗೂ ಪ್ರಧಾನಿ ತಲೆಬಗ್ಗಿಸಿದ್ದಾರೆ. ಹಿಟ್ಲರ್ ಆಡಳಿತ ಕೊನೆಗೊಳ್ಳುವ ಸಾಧ್ಯತೆಯಿದೆ.ರಾಜ್ಯದಲ್ಲೂ ಈ ಕಾಯ್ದೆಯನ್ನ ವಾಪಸ್ ಪಡೆಯಬೇಕು ಎಂದರು.