ಸಾಲೆತ್ತೂರು: ಕೇಬಲ್ ಕದ್ದು ರೆಡ್ ಹ್ಯಾಂಡ್ ಆಗಿ ಸಾರ್ವಜನಿಕರ ಕೈಗೆ ಸಿಕ್ಕಿ ಒದೆ ತಿಂದ ಕಳ್ಳರು

Prasthutha|

ಸಾಲೆತ್ತೂರು: ಮನೆಯೊಂದರಿಂದ ಕೇಬಲ್ ಕಳ್ಳತನ ನಡೆಸಿ ಬರುತ್ತಿದ್ದಾಗ ರೆಡ್ ಹ್ಯಾಂಡಾಗಿ ಕಳ್ಳರಿಬ್ಬರು ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ಘಟನೆ ಸಾಲೆತ್ತೂರು ಸಮೀಪದ ಪುದೊಟ್ಟು ಎಂಬಲ್ಲಿ ನಡೆದಿದೆ.

- Advertisement -

ಸಾಲೆತ್ತೂರು ಕಟ್ಟೆ ಕಾಲೋನಿ ನಿವಾಸಿ ಉಸ್ಮಾನ್ ಯಾನೆ ಮೋನು(38) ಮತ್ತು ಮಂಚಿ ಕೋಕಳ ನಿವಾಸಿ ಪಿ.ಜಿ. ಅಬೂಬಕ್ಕರ್(30) ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ವಿಟ್ಲ ಪೊಲೀಸರ ವಶವಾದ ಆರೋಪಿಗಳು.

ಇವರಿಬ್ಬರೂ ಹಲವು ಸಮಯಗಳಿಂದ ಟೆಲಿಫೋನ್ ಕಂಬ, ದೂರವಾಣಿ ಕೇಬಲ್ ಮತ್ತು ವಿದ್ಯುತ್ ಚಾಲಿತ ಪಂಪುಗಳ ಕೇಬಲ್‌ಗಳನ್ನು ಕಳ್ಳತನ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಸುದ್ದಿ ಹಬ್ಬುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಮನಬಂದಂತೆ ಒದೆ ನೀಡಿದ ಬಳಿಕ ವಿಟ್ಲ ಪೊಲೀಸರ ವಶಕ್ಕೊಸಿದ್ದಾರೆ ಎಂದು ತಿಳಿಯಲಾಗಿದೆ.



Join Whatsapp