ಸಜಿಪನಡು ಗ್ರಾಮಕ್ಕೆ ಬಂಟ್ವಾಳದ ತಾಜ್ಯ ಸುರಿದಲ್ಲಿ ಶಾಸಕರ ಮನೆ ಮುಂದೆ ಧರಣಿ ಕೂರುತ್ತೇವೆ : ಪಂಚಾಯತ್ ಅಧ್ಯಕ್ಷೆ ಫೌಝಿಯಾ

Prasthutha|

►ಜಿಲ್ಲಾಧಿಕಾರಿಗಳ ಆದೇಶ ಮೀರಿ ಸಜಿಪನಡುವಿನಲ್ಲಿ ಹಸಿ ತಾಜ್ಯ ಸುರಿಯುವ ಆರೋಪ  

- Advertisement -

ಸಜಿಪನಡು ಗ್ರಾಮದ ಕಂಚಿನಡ್ಕದವು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶವನ್ನೂ ಮೀರಿ ಬಂಟ್ವಾಳ ಪುರಸಭೆ ಹಸಿಕಸ ಸಾಗಿಸುತ್ತಿದೆ. ಇದನ್ನು ವಿರೋಧಿಸಿ ಸಜಿಪನಡು ಗ್ರಾಮಪಂಚಾಯತ್ ನೇತೃತ್ವದಲ್ಲಿ ಬಂಟ್ವಾಳ ಪುರಸಭೆಯ ಎದುರು ಇಂದು ಗ್ರಾಮದ ನಾಗರಿಕರು ವಿಶಿಲ್ ಮಾರ್ಚ್ ನೊಂದಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಫೌಝಿಯಾ ಬಾನು, ಇಂದಿನ ಪ್ರತಿಭಟನೆ ನಮ್ಮ ಮೊದಲ ಹೆಜ್ಜೆಯಾಗಿದ್ದು, ಇದಕ್ಕೆ ಸೂಕ್ತವಾಗಿ  ಸ್ಪಂದಿಸದಿದ್ದರೆ, ಬಂಟ್ವಾಳ ಮತ್ತು ಮಂಗಳೂರು ಶಾಸಕರ ಮನೆ ಮುಂದೆ ಧರಣಿ  ನಡೆಸುತ್ತೇವೆ. ಅದಕ್ಕೂ ಸ್ಪಂದನೆ ಸಿಗದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಬಂಟ್ವಾಳದ ಹಸಿ ತ್ಯಾಜ್ಯವನ್ನು ಕಂಚಿನಡ್ಕಪದವಿಗೆ ತರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.  

- Advertisement -

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಗ್ರಾಪಂ ಮಾಜಿ ಅಧ್ಯಕ್ಷ ಮೊಹಮ್ಮದ್ ನಾಸಿರ್ ಸಜಿಪ, ಗ್ರಾಪಂ ಉಪಾಧ್ಯಕ್ಷ ಎಸ್.ಎನ್. ಅಬ್ದುಲ್ ರಹಿಮಾನ್, ಪ್ರಮುಖರಾದ ಸುರೇಶ್ ಬಂಗೇರ ಹಾಗೂ ಸ್ಥಳೀಯ ನಿವಾಸಿ ಮಹಿಳೆಯರು ಈ ಕುರಿತು ಮಾತನಾಡಿ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಗ್ರಾಪಂ ಸದಸ್ಯರಾದ ಇಸ್ಮಾಯಿಲ್ ಗೋಳಿಪಡ್ಪು, ಸುಶೀಲ, ಶೋಭಾ, ಬಬಿತಾ, ಮಮ್ತಾಝ್, ಬೀಫಾತುಮ್ಮ ಪ್ರಮುಖರಾದ ಐವನ್, ರಶೀದ್ ಸಜಿಪ ಮೊದಲಾದವರು ಪ್ರತಿಭಟನೆಯಲ್ಲಿ ಹಾಜರಿದ್ದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದವರು ಆ ಬಳಿಕ ಬಂಟ್ವಾಳ ತಾಲೂಕು ಕಚೇರಿಯ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ನರೇಂದ್ರನಾಥ ಭಟ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Join Whatsapp