“ದೇಶಕ್ಕೆ ಇದೊಂದು ಹೆಮ್ಮೆಯ ಕ್ಷಣ”; ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದ ಇನ್ಸ್‌ ಪೆಕ್ಟರ್ ಸಾಜನ್‌ ಪ್ರಕಾಶ್‌ ಗೆ ಕೇರಳ ಪೊಲೀಸರ ಅಭಿನಂದನೆ

Prasthutha|

ಕೊಚ್ಚಿ : ಇನ್ನು ಕೆಲವೇ ದಿನಗಳಲ್ಲಿ ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯಲಿದೆ. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗಿಯಾಗಲು ಕೇರಳದ ಪೊಲೀಸ್‌ ಅಧಿಕಾರಿ ಭಾರತದ ಖ್ಯಾತ ಈಜುಪಟು ಸಾಜನ್‌ ಪ್ರಕಾಶ್‌ ಅಧಿಕೃತವಾಗಿ ಅರ್ಹರಾಗಿದ್ದಾರೆ. ಇಟಲಿಯಲ್ಲಿ ನಡೆದ ಈಜು ಸ್ಪರ್ಧೆಯೊಂದರಲ್ಲಿ ಪ್ರಕಾಶ್‌ ಒಲಿಂಪಿಕ್‌ ʼಎʼ ಅರ್ಹತಾ ಮಾನದಂಡದಲ್ಲಿ ಒಲಿಂಪಿಕ್ಸ್‌ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ವಿಭಾಗದಲ್ಲಿ ಒಲಿಂಪಿಕ್ಸ್‌ ಗೆ ಅರ್ಹತೆ ಗಿಟ್ಟಿಸಿಕೊಂಡ ಮೊದಲ ಭಾರತೀಯ ಈಜುಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

- Advertisement -

200 ಮೀಟರ್‌ ಫ್ಲೈ ಸ್ಪರ್ಧೆಯಲ್ಲಿ ಪ್ರಕಾಶ್‌ ಅವರು 1:56:38 ಸೆಕೆಂಡ್‌ ಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದರು. 26 ಹರೆಯದ ಈಜುಗಾರನ ಸಾಧನೆಯ ಬಗ್ಗೆ ತನ್ನ ಅಧಿಕೃತ ಟ್ವಟರ್‌ ಖಾತೆಯಲ್ಲಿ ಕೇರಳ ಪೊಲೀಸ್‌ ಇಲಾಖೆ ಈ ವಿಷಯ ತಿಳಿಸಿದೆ. ಅಲ್ಲದೆ, ಇದು ನಮ್ಮ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದೆ.

 ಸಾಜನ್‌ ಪ್ರಕಾಶ್‌ ಅವರು ಕೇರಳ ಪೊಲೀಸ್‌ ಇಲಾಖೆಯಲ್ಲಿ ಆರ್ಮ್ಡ್‌ ಪೊಲೀಸ್‌ ಇನ್ಸ್‌ ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಅವರು ಒಲಿಂಪಿಕ್ಸ್‌ ಗೆ ಆಯ್ಕೆಯಾಗಿರುವ ಬಗ್ಗೆ ಕೇರಳ ಪೊಲೀಸ್‌ ಇಲಾಖೆ ಸೇರಿದಂತೆ ಹಲವು ಮಂದಿ ಹರ್ಷ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ಸ್‌ ನಲ್ಲಿ ಸಾಜನ್‌ ಪ್ರಕಾಶ್‌ ಗೆಲ್ಲಲಿ ಎಂದು ಹಲವರು ಶುಭ ಕೋರಿದ್ದಾರೆ.



Join Whatsapp