ಅಚ್ಛೇ ದಿನ್!‌ | 110 ರೂ. ದಾಟಿದ ಪೆಟ್ರೋಲ್‌ ಬೆಲೆ | ಡೀಸೆಲ್‌ ಬೆಲೆ 101+ ರೂ.!

Prasthutha: June 27, 2021

ಜೈಪುರ : ಪೆಟ್ರೋಲ್‌, ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ರಾಕೆಟ್‌ ವೇಗದಲ್ಲಿ ಏರಿಕೆಯಾಗುತ್ತಲೇ ಇದೆ. ಈ ನಡುವೆ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಭಾರೀ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್‌ ಬೆಲೆ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ಗೆ 110 ರೂ ಮತ್ತು ಡೀಸೆಲ್‌ ಬೆಲೆ 101 ರೂ. ಗಡಿ ದಾಟಿದೆ.

ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಭಾನುವಾರ ಪೆಟ್ರೋಲ್‌ ಬೆಲೆಯಲ್ಲಿ 36 ಪೈಸೆ ಹಾಗೂ ಡೀಸೆಲ್‌ ಬೆಲೆಯಲ್ಲಿ 27 ಪೈಸೆ ಏರಿಕೆಯಾಗಿದೆ. ಆ ಮೂಲಕ ಪ್ರೀಮಿಯಂ ಪೆಟ್ರೋಲ್‌ ಬೆಲೆ 112.24 ರೂ., ಸಾಮಾನ್ಯ ಪೆಟ್ರೋಲ್‌ ಬೆಲೆ 109.49 ರೂ. ಹಾಗೂ ಡೀಸೆಲ್ ಬೆಲೆ 101.96 ರೂ. ಆಗಿದೆ.

ರಾಜಸ್ಥಾನದ ಹನುಮಾನ್‌ ಗಢದಲ್ಲೂ ಪ್ರೀಮಿಯಂ ಪೆಟ್ರೋಲ್‌ ಬೆಲೆ 112.11 ರೂ., ಸಾಮಾನ್ಯ ಪೆಟ್ರೋಲ್‌ ಬೆಲೆ 109.05 ರೂ. ಹಾಗೂ ಡೀಸೆಲ್‌ ಬೆಲೆ 101.55 ರೂ. ಆಗಿದೆ.

ಮಧ್ಯಪ್ರದೇಶದಲ್ಲೂ ಪೆಟ್ರೋಲ್‌ ಬೆಲೆ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜಸ್ಥಾನದ ಕೆಲವು ನಗರಗಳಲ್ಲಿ ಪೆಟ್ರೋಲ್‌ ಬೆಲೆ 109 ರೂ. ಗಡಿ ದಾಟಿದೆ. ಬಹುತೇಕ ನಗರಗಳಲ್ಲಿ 108 ರೂ. ದಾಟಿದೆ. ರಾಜಸ್ಥಾನದ ಶಾದೊಲ್‌ ನಲ್ಲಿ ಸಾಮಾನ್ಯ ಪೆಟ್ರೋಲ್‌ ಬೆಲೆ 109.14 ರೂ. ಆಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ