ಸಾಯಿಶಂಕರ ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿಯೇ ನಡೆದಿಲ್ಲವೆಂದ ಆಡಳಿತ ಮಂಡಳಿ: ಮತ್ತೆಲ್ಲಿ ಮಂಗಳ ಗ್ರಹದಲ್ಲೇ ಎಂದು ಪ್ರಶ್ನಿಸಿದ ನೆಟ್ಟಿಗರು

Prasthutha|

ಕೊಡಗು: ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲೆಯಲ್ಲಿ ಬಜರಂಗದಳದಿಂದ ನೂರಾರು ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ ಎಂಬ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಈ ಬಗ್ಗೆ ಊಸರವಳ್ಳಿಯ ಹೇಳಿಕೆಯೊಂದನ್ನು ನೀಡಿದೆ.

- Advertisement -

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಸಾಯಿ ಶಂಕರ ವಿದ್ಯಾಸಂಸ್ಥೆಯ ಆವರಣದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರ ತರಬೇತಿ ನಡೆದಿಲ್ಲ ಎಂದು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹೇಳಿದ್ದು, ಕೆಲವರು ರಾಜಕೀಯ ಲಾಭಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಝರು ಗಣಪತಿ ಹೇಳಿಕೊಂಡಿದ್ದಾರೆ.

ಆದರೆ ಸಾಯಿ ಶಂಕರ ಶಾಲೆಯಲ್ಲಿ  8 ದಿನಗಳ ತರಬೇತಿ ನಡೆದಿದ್ದು ಆ ಅವಧಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಕೂಡ ಹೊರಬಿದ್ದಿದ್ದು ಹಾಗೇಯೆ ಈ ಶಸ್ತ್ರಾಸ್ತ್ರ ತರಬೇತಿ ಪೊಲೀಸರ ಅರಿವಿನಲ್ಲಿಯೇ ನಡೆದಿದೆ ಎಂದು ವಿಹೆಚ್ ಪಿ ಮುಖಂಡ  ಕೃಷ್ಣಮೂರ್ತಿ ಹೇಳಿದ್ದರು ಮತ್ತು ಸಿಟಿ ರವಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಕೊಡಗಿನ ಪೊನ್ನಂಪೇಟೆ ಶಾಲೆಯಲ್ಲಿ ನಡೆದದ್ದು NSS ನಂತಹ ಸಣ್ಣ ಮಟ್ಟದ ತರಬೇತಿ ಅದರಲ್ಲಿ ತಪ್ಪೇನಿದೆ ಎಂದು ಅದರ ಪರವಾಗಿ ಬ್ಯಾಟಿಂಗ್ ಮಾಡಿದ್ದರು.

- Advertisement -

ಈಗ ಆಡಳಿತ ಸಮಿತಿಯು ನಮ್ಮ ಶಾಲೆಯಲ್ಲಿ ತರಬೇತಿಯೇ ನಡೆದಿಲ್ಲ ಎಂಬುವುದರಲ್ಲಿ ಎಷ್ಟರ ಮಟ್ಟಿಗೆ ಸತ್ಯವಿದೆ. ಹಾಗಾದರೆ ಯಾವ ನಿಗೂಢ ಸ್ಥಳದಲ್ಲಿ ಈ ಉಗ್ರವಾದ ತರಬೇತಿ ನಡೆಯಿತು ಅಥವಾ ಮಂಗಳ ಗ್ರಹದಲ್ಲೇನಾದರೂ ನಡೆಯಿತೇ ಎಂದು ನೆಟ್ಟಿಗರು ಪ್ರಶ್ನಿಸಿದ್ದು ಹಾಗಾದರೆ ತರಬೇತಿ ನಡೆದ ಸ್ಥಳವನ್ನು ಅಧಿಕಾರಿಗಳು ಸೀಲ್ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ

Join Whatsapp