ಹಿಂದೂ ದಂಪತಿ ನಾಲ್ಕು ಮಕ್ಕಳನ್ನು ಹೆಡೆದು, ಎರಡನ್ನು ದೇಶಕ್ಕೆ ಸಮರ್ಪಿಸಲಿ ಎಂದ ಸಾಧ್ವಿ ರಿತಂಬರಾ

Prasthutha|

ನವದೆಹಲಿ: ಪ್ರತಿ ಹಿಂದೂ ದಂಪತಿ ನಾಲ್ಕು ಮಕ್ಕಳನ್ನು ಹೆಡೆಯಬೇಕು ಮತ್ತು ಹಿಂದೂರಾಷ್ಟ್ರದ ನಿರ್ಮಾಣಕ್ಕಾಗಿ ಆ ಪೈಕಿ ಇಬ್ಬರನ್ನು ದೇಶಕ್ಕೆ ಸಮರ್ಪಿಸಬೇಕೆಂದು ಹಿಂದುತ್ವ ಪರ ನಾಯಕಿ ಸಾಧ್ವಿ ರಿತಂಬರಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -

ದೆಹಲಿಯ ಜಹಾಂಗೀರಪುರಿಯಲ್ಲಿ ನಡೆದ ಕೋಮು ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ಹನುಮ ಜಯಂತಿ ಶೋಭಾ ಯಾತ್ರೆಯ ಮೇಲೆ ದಾಳಿ ಮಾಡಿದವರು ದೇಶದ ಪ್ರಗತಿಯ ಬಗ್ಗೆ ಅಸೂಯೆ ಹೊಂದಿದ್ದಾರೆ ಎಂದು ತಿಳಿಸಿದರು.

ರಾಜಕೀಯಕ್ಕಾಗಿ ಹಿಂದೂ ಸಮಾಜವನ್ನು ಒಡೆಯಲಾಗುತ್ತಿದೆ ಎಂದು ಅವರು ಆರೋಪಿಸಿದರು.

- Advertisement -

ನಿರಾಲಾ ನಗರದಲ್ಲಿ ನಡೆದ ರಾಮ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಮಹಿಳೆಯರು ಎರಡು ಮಕ್ಕಳನ್ನು ಪಡೆಯುವ ನೀತಿಯನ್ನು ನಿಲ್ಲಿಸಿ ನಾಲ್ಕು ಮಕ್ಕಳನ್ನು ಹೆಡೆಯುವ ಕಡೆಗೆ ಗಮನ ಹರಿಸಬೇಕೆಂದು ಕರೆ ನೀಡಿದರು.

ನಾಲ್ಕು ಮಕ್ಕಳ ಪೈಕಿ ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಎರಡನ್ನು ದೇಶಕ್ಕೆ ಸಮರ್ಪಿಸಬೇಕು ಮತ್ತು ಇನ್ನುಳಿದ ಎರಡನ್ನು ಕುಟುಂಬಕ್ಕಾಗಿ ಇರಿಸುವಂತೆ ಅವರು ಹೇಳಿದರು.

ಜನಸಂಖ್ಯೆಯ ಅಸಮತೋಲನವಾಗದಂತೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂದು ಅವರು ಆಗ್ರಹಿಸಿದರು.

Join Whatsapp