ಉಕ್ರೇನ್‌ ಮೇಲೆ ರಷ್ಯಾ ದಾಳಿ; ಧರಾಶಾಹಿಯಾದ ಹತ್ತು ಗಗನ ಚುಂಬಿ ಕಟ್ಟಡಗಳು

Prasthutha|

ಕೀವ್‌: ಉಕ್ರೇನ್‌ ವಿರುದ್ಧ ರಷ್ಯಾ ದಾಳಿ ಮುಂದುವರಿದಿದ್ದು,ಪೂರ್ವ ಮತ್ತು ದಕ್ಷಿಣ ಭಾಗದ ಲುಗಾನ್ಸ್ಕ್ ನಲ್ಲಿ  ರಷ್ಯಾ ಸೇನೆ ಹಲವು ಕಟ್ಟಡಗಳ ಮೇಲೆ ದಾಳಿ ದಾಳಿ ನಡೆಸಿದೆ.ಈ ಹಿನ್ನೆಲೆಯಲ್ಲಿ ಸುರಕ್ಷಿತ ಪ್ರದೇಶಕ್ಕೆ ತೆರಳಿ ಸಾವಿನಿಂದ ತಪ್ಪಿಸಿಕೊಳ್ಳಲು ಉಕ್ರೇನ್‌ ತನ್ನ ನಾಗರಿಕರಿಗೆ ಸೂಚಿಸಿದೆ.  

- Advertisement -

ಹತ್ತು ಗಗನ ಚುಂಬಿ ಕಟ್ಟಡಗಳು ಧರಾಶಾಹಿಯಾದ ಕಾರಣದಿಂದಾಗಿ ಜನರನ್ನು ತೆರವುಗೊಳಿಸುವ ಕಾರ್ಯಕ್ಕೆ ಅಡ್ಡಿಯುಂಟಾಗಿದೆ.

ಡಾನೆಸ್ಕ್ ನಲ್ಲಿ ನಿರಾಶ್ರಿತ  ನೆರವು ಕೇಂದ್ರದ ಬಳಿ ದಾಳಿ ನಡೆದ ಪರಿಣಾಮ ಇಬ್ಬರು ನಾಗರಿಕರು ಹತರಾಗಿದ್ದು, ಹೊಸ್ಟೊಮೆಲ್‌ ನಗರದ 400 ಮಂದಿ ಕಾಣೆಯಾಗಿದ್ದಾರೆ ಎಂದು  ಆಡಳಿತ ಮೂಲಗಳು ತಿಳಿಸಿವೆ.

- Advertisement -

ಇತ್ತೀಚೆಗೆ ಬುಚಾದಲ್ಲಿ ನಡೆದ ದೊಡ್ಡ ನರಮೇಧದಲ್ಲಿ 25ಕ್ಕೂ ಅಧಿಕ ಮಹಿಳೆಯರು ರಷ್ಯಾ ಸೈನಿಕರಿಂದ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ಆರೋಪಿಸಿದ್ದಾರೆ.

ಉಕ್ರೇನ್‌ನ ನೆರೆ ರಾಷ್ಟ್ರವಾಗಿರುವ ಹಂಗೇರಿಯ ಪ್ರಧಾನಿ ವಿಕ್ಟರ್‌ ಒರ್ಬಾನ್‌ ಅವರು ಕದನ ವಿರಾಮ ಘೋಷಿಸುವಂತೆ  ರಷ್ಯಾ ಅಧ್ಯಕ್ಷ ಪುತಿನ್‌ಗೆ ಮನವಿ ಮಾಡಿದ್ದಾರೆ. ಉಕ್ರೇನ್‌ಗೆ ಸಹಾಯ ಹಸ್ತ ಚಾಚಿರುವ ಐರಿಷ್‌ ರಾಷ್ಟ್ರಕ್ಕೆ ಉಕ್ರೇನ್‌ ಅಧ್ಯಕ್ಷ ಝೆಲೆನ್‌ ಸ್ಕಿ ಧನ್ಯವಾದ ತಿಳಿಸಿದ್ದಾರೆ.



Join Whatsapp