10ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ ನಗದು ನೀಡುವುದಾಗಿ ಘೋಷಿಸಿದ ರಷ್ಯಾ ಅಧ್ಯಕ್ಷ

Prasthutha|

ಮಾಸ್ಕೋ: ಮಕ್ಕಳು “ಒಂದು ಬೇಕು, ಎರಡು ಸಾಕು” ಎನ್ನುವ ಈ ಕಾಲದಲ್ಲಿ ದೇಶದ ಜನಸಂಖ್ಯಾ ಬಿಕ್ಕಟ್ಟನ್ನು ಹೋಗಲಾಡಿಸಲು 10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ ಹಣದ ಆಫರ್ ಅನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಘೋಷಿಸಿದ್ದಾರೆ.

- Advertisement -

ಕೊರೋನಾ ಹಾಗೂ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಸಾಕಷ್ಟು ಸಾವುಗಳು ಸಂಭವಿಸಿದ್ದು, ರಷ್ಯಾದಲ್ಲಿ ಜನಸಂಖ್ಯೆ ಬಿಕ್ಕಟ್ಟು ಉಂಟಾಗಿರುವುದರಿಂದ ಸರ್ಕಾರ ಈ ವಿನೂತನ ಯೋಜನೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಹತ್ತು ಮಕ್ಕಳಿಗೆ ಜನ್ಮ ನೀಡಿ, ಆ ಹತ್ತು ಮಕ್ಕಳನ್ನು ಬೆಳೆಸಿದರೆ  13,500 ಪೌಂಡ್ (12,93,163 ರೂಪಾಯಿ) ಹಣದ ಜೊತೆಗೆ ಅನೇಕ ಸೌಲಭ್ಯಗಳನ್ನು ಒದಗಿಸುವುದಾಗಿ ರಷ್ಯಾ ಸರ್ಕಾರ ಘೋಷಣೆ ಮಾಡಿದೆ. ಆದರೆ, ರಷ್ಯಾದಲ್ಲಿ ಅನೇಕ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳಿರುವಾಗ 10 ಮಕ್ಕಳನ್ನು ಬೆಳೆಸುವುದು ವ್ಯರ್ಥ ಪ್ರಯತ್ನ  ಎಂದು ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Join Whatsapp