ಅಕ್ರಮ ಬಾರ್ ವಿವಾದ: ಸ್ಮೃತಿ ಇರಾನಿ ವಜಾಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಗೋವಾ ಶಾಸಕ

Prasthutha|

ಪಣಜಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ತಕ್ಷಣವೇ ವಜಾಗೊಳಿಸಿ, ಕರಾವಳಿ ರಾಜ್ಯದಲ್ಲಿ ಕುಟುಂಬ ನಡೆಸುತ್ತಿರುವ ವ್ಯವಹಾರದ ಬಗ್ಗೆ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗೆ ದಾರಿ ಮಾಡಿಕೊಡಬೇಕೆಂದು ಗೋವಾ ಕಾಂಗ್ರೆಸ್ ಶಾಸಕ ಸಂಕಲ್ಪ್ ಅಮೋನ್ಕರ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಮೊರ್ಮುಗಾವೊದ ಶಾಸಕ ಅಮೋನ್ಕರ್, ಆರ್ ಟಿಐ ಕಾರ್ಯಕರ್ತ ಅಡ್ವ ಐರಿಸ್ ರೊಡ್ರಿಗಸ್ ಅವರು ನೀಡಿದ ದೂರಿನ ಬಗ್ಗೆ ಗೋವಾದ ವಿವಿಧ ಇಲಾಖೆಗಳು ಪ್ರಸ್ತುತ ವಿಚಾರಣೆ ನಡೆಸುತ್ತಿವೆ ಎಂದು ಹೇಳಿದರು.

“ಸ್ಮೃತಿ ಇರಾನಿ ಪದವಿಯ ತನ್ನ ಪದವಿಯ ಕುರಿತು ಸುಳ್ಳು ಹೇಳಿದ್ದು, ಇದೀಗ ಗೋವಾದಲ್ಲಿ ತಮ್ಮ ಕುಟುಂಬ ನಡೆಸುವ ವ್ಯವಹಾರದ ಬಗ್ಗೆ ಮತ್ತೊಮ್ಮೆ ಇಡೀ ದೇಶಕ್ಕೆ ಸುಳ್ಳು ಹೇಳಿದ್ದಾರೆ. 2019ರ ಚುನಾವಣೆಯ ಸಮಯದಲ್ಲಿ ಇಸಿಐಗೆ ಸಲ್ಲಿಸಿದ ದಾಖಲೆಗಳನ್ನು ನೋಡಿದರೆ ಇತ್ತೀಚಿನ ಅಫಿದವಿತ್ ನಿಂದ ಬೆಂಬಲಿಸಲಾದ ಎಲ್ಲಾ ಸಾಂದರ್ಭಿಕ ಪುರಾವೆಗಳು, ರಿಜಿಸ್ಟ್ರಾರ್ ಆಫ್ ಕಂಪನೀಸ್ ಮಹಾರಾಷ್ಟ್ರದ ದಾಖಲೆಗಳು ಮತ್ತು ಜಿಎಸ್ಟಿ ವಿವರಗಳು ‘ಅಸ್ಸಗಾವೊ ಗೋವಾದ ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್ ಅನ್ನು ಅವರ ಕುಟುಂಬವು ನಡೆಸುತ್ತಿದೆ ಎಂದು ಮೇಲ್ನೋಟಕ್ಕೆ ಸಾಬೀತುಪಡಿಸುತ್ತದೆ” ಎಂದು ಅಮೋನ್ಕರ್ ಹೇಳಿದರು.

Join Whatsapp