ಮುಂಬೈ: ಯುದ್ದ ಪೀಡಿತ ಉಕ್ರೇನ್’ನಿಂದ 219 ಭಾರತೀಯರನ್ನು ಒಳಗೊಂಡ ಮೊದಲ ಏರ್ ಇಂಡಿಯಾ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಇದರ ಬೆನ್ನಲ್ಲೇ 250 ಮಂದಿ ಭಾರತೀಯರನ್ನು ಹೊತ್ತ ಮತ್ತೊಂದು ವಿಮಾನ
ರೊಮೇನಿಯಾದ ರಾಜಧಾನಿ ಬುಕಾರೆಸ್ಟ್’ನಿಂದ ದೆಹಲಿಯತ್ತ ಪ್ರಯಾಣ ಬೆಳೆಸಿದೆ.
ಈ ಕುರಿತು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಉಕ್ರೇನ್ ತನ್ನ ವಾಯುಯಾನ ಮಾರ್ಗಗಳನ್ನು ಮುಚ್ವಿರುವುದರಿಂದ ನಾಗರಿಕ ವಿಮಾನಗಳ ಕಾರ್ಯಾಚರಣೆ ಬಂದ್ ಆಗಿದ್ದು, ಈ ಹಿನ್ನೆಲೆಯಲ್ಲಿ ಉಕ್ರೇನ್’ನಿಂದ ರೊಮೇನಿಯಾಕ್ಕೆ ಸ್ಥಳಾಂತರಗೊಂಡಿದ್ದ ಭಾರತೀಯರನ್ನು, ರೊಮೇನಿಯಾದ ರಾಜಧಾನಿ ಬುಕಾರೆಸ್ಟ್’ನಿಂದ ಏರ್ ಇಂಡಿಯಾ ವಿಮಾನದಲ್ಲಿ ಶನಿವಾರ ಸಂಜೆ ಮುಂಬೈಗೆ ಕರೆತರಲಾಗಿದೆ .
ಮುಂಬೈ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಎಲ್ಲರನ್ನೂ ಬರಮಾಡಿಕೊಂಡರು.
ಎಲ್ಲರಿಗೂ ಸ್ವಾಗತ. ‘ಆಪರೇಷನ್ ಗಂಗಾ’ದ ಮೊದಲ ಹೆಜ್ಜೆ’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರು ಟ್ವಿಟರ್‌ನಲ್ಲಿ ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ.