ಅಪ್ಪಳಿಸಲಿದೆ ಕೋವಿಡ್ ನಾಲ್ಕನೇ ಅಲೆ: ಐಐಟಿ ತಜ್ಞರ ಅಂದಾಜು

Prasthutha|

ಹೈದರಾಬಾದ್: ಕೋವಿಡ್-19 ಸೋಂಕಿನ ಮೂರನೇ ಅಲೆ ಇಳಿಕೆಯಾಗುತ್ತಿದ್ದು ಇದೀಗ ನಾಲ್ಕನೇ ಅಲೆ ಬಗ್ಗೆ ತಜ್ಞರು ಆತಂಕಗೊಂಡಿದ್ದಾರೆ.

- Advertisement -

ದೇಶದಲ್ಲಿ ಜೂನ್ ನಿಂದ ಅಕ್ಟೋಬರ್ ವರೆಗೂ ನಾಲ್ಕನೇ ಅಲೆಯ ಅಟ್ಟಹಾಸ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ. ಆದರೆ ನಾಲ್ಕನೇ ಅಲೆಯ ತೀವ್ರತೆ ಹೊಸ ಪ್ರಬೇಧ ರೂಪುಗೊಳ್ಳುವ ಮತ್ತು ಬೂಸ್ಟರ್ ಡೋಸ್ ಸೇರಿದಂತೆ ಜನಸಾಮಾನ್ಯರ ಲಸಿಕೆ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾನ್ಪುರದ ಐಐಟಿ ಸಂಶೋಧಕರು ಕೋವಿಡ್-19 ಸೋಂಕಿನ ನಾಲ್ಕನೇ ಅಲೆಯನ್ನು ಪತ್ತೆಪತ್ತೆಹಚ್ಚಿದ್ದು, ದೇಶದಲ್ಲಿ ಕೋವಿಡ್-19 ಅಲೆಯನ್ನು ಐಐಟಿ ಕಾನ್ಪುರ ಅಂದಾಜಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಮೂರನೇ ಅಲೆಯ ಅಂದಾಜು ಬಹುತೇಕ ನಿಖರವಾಗಿದ್ದು, ಕೆಲ ದಿನಗಳಷ್ಟೇ ವ್ಯತ್ಯಯವಾಗಿತ್ತು.ಇದೀಗ ಕನಿಷ್ಠ ನಾಲ್ಕು ತಿಂಗಳವರೆಗೆ ನಾಲ್ಕನೇ ಅಲೆಯ ಭೀತಿಯನ್ನು ಎದುರಿಸಬೇಕಾಬಹುದು ಎಂಬ ಆಘಾತಕಾರಿ ಸುದ್ಧಿಯನ್ನು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಐಐಟಿ ಕಾನ್ಪುರದ ಗಣಿತಶಾಸ್ತ್ರ ಮತ್ತು ಅಂಕಿ ಸಂಖ್ಯೆಗಳ ಶಾಸ್ತ್ರ ವಿಭಾಗದ ಸಬರ ಪರಿಷದ್ ರಾಜೇಶ್‌ಭಾಯ್, ಶಂಕರ್ ಧರ್ ಮತ್ತು ಶಲಭ್ ಅವರು ಈ ಅಧ್ಯಯನ ಕೈಗೊಂಡಿದ್ದರು. ಆರಂಭಿಕ ಕೋವಿಡ್-19 ಅಂಕಿ ಸಂಖ್ಯೆಗಳು ಲಭ್ಯವಾದ 936 ದಿನಗಳ ಬಳಿಕ ಅಂದರೆ ಜೂನ್ 22ಕ್ಕೆ ನಾಲ್ಕನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಅಂದಾಜಿಸಿದ್ದಾರೆ.

Join Whatsapp