ಮಾಸ್ಕೋ: ಯೂರೋಪಿಗೆ ನಾರ್ಡ್ ಸ್ಟ್ರೀಮ್ 1 ಕೊಳವೆ ಮಾರ್ಗದ ಮೂಲಕ ಹೋಗುವ ನೈಸರ್ಗಿಕ ಅನಿಲ ಪೂರೈಕೆಯನ್ನು ನಿಲ್ಲಿಸುವುದಾಗಿ ರಷ್ಯಾ ಬೆದರಿಕೆ ಹಾಕಿದೆ. ತನ್ನ ಮೇಲೆ ಆರ್ಥಿಕ ನಿರ್ಬಂಧ ಮುಂದುವರಿಸಿದರೆ ಗ್ಯಾಸ್ ಪೂರೈಕೆ ನಿಲ್ಲಿಸುವುದಾಗಿ ರಷ್ಯಾ ಹೇಳಿದೆ. ನಾರ್ಡ್ ಗ್ಯಾಸ್ ಪೈಪ್ ಲೈನ್ ಮುಚ್ಚುವ ತೀರ್ಮಾನ ಮಾಡಿಲ್ಲ. ಈಗ ಪೂರ್ಣ ಪ್ರಮಾಣದಲ್ಲಿ ಹರಿದಿದೆ.ಆದರೆ ನನ್ನ ಮೇಲಿನ ಹಣಕಾಸು ದಂಡ ಹೇರಿದಲ್ಲಿ ನಾವು ಗ್ಯಾಸ್ ನಿಲ್ಲಿಸುವಂತಹ ಪ್ರತಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಉಪ ಪ್ರಧಾನಿ ಮತ್ತು ಇಂಧನ ಸಚಿವ ಅಲೆಗ್ಸಾಂಡರ್ ನೊವಾಕ್ ಟೀವಿ ಭಾಷಣದಲ್ಲಿ ಹೇಳಿದ್ದಾರೆ. ರಷ್ಯಾ ಗ್ಯಾಸ್ ಪೂರೈಕೆ ನಿಲ್ಲಿಸುವುದಕ್ಕೆ ಮೊದಲೇ ರಷ್ಯಾ ನಿಲ್ಲಿಸಬಹುದು ಎಂಬ ವದಂತಿ ಹರಡಿ ಯೂರೋಪ್ ಮಾರುಕಟ್ಟೆಯಲ್ಲಿ ಅನಿಲ ದರ ಕೆಲವೆಡೆ ಶೇ. 80ರಷ್ಟು ಹೆಚ್ಚಾಗಿದೆ. 11 ಬಿಲಿಯನ್ ಡಾಲರ್ ವೆಚ್ಚದ ನಾರ್ಡ್ ಸ್ಟ್ರೀಮ್ 2ನೇ ಪೈಪ್ ಲೈನ್ ಯೋಜನೆಯನ್ನು ಬರ್ಲಿನ್ ಮುಂದಿಟ್ಟಿತ್ತು. ಆದರೆ ರಷ್ಯಾ ಅವಲಂಬನೆಯನ್ನು ಶೇ. 80ರಷ್ಟು ಕಡಿಮೆ ಮಾಡುವ ಬದಲಿ ಇಂಧನ ವ್ಯವಸ್ಥೆಯಲ್ಲಿ ತೊಡಗಿದ್ದಾಗಿ ಯೂರೋಪಿಯನ್ ಯೂನಿಯನ್ ಸದಸ್ಯ ದೇಶಗಳು ಹೇಳಿದ್ದವು. ಜರ್ಮನ್ ಚಾನ್ಸೆಲರ್ ಓಲಾಫ್ ಶೂಲ್ಜ್ ಅವರು ಯೂರೋಪಿನ ಆರ್ಥಿಕ ವ್ಯವಸ್ಥೆಯಲ್ಲಿ ರಷ್ಯನ್ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ತನ್ನದೇ ಮಹತ್ವ ಪಡೆದಿರುವುದಾಗಿ ಹೇಳಿದ್ದಾರೆ. ಅಲ್ಲದೆ ರಷ್ಯಾಕ್ಕೆ ಯೂರೋಪ್ ಹೊರತಾಗಿ ಬೇರೆ ಕಡೆ ಕೂಡ ಮಾರಲು ಅವಕಾಶ ಇದ್ದೇ ಇದೆ. ಆದರೆ ರಷ್ಯಾದಿಂದ ಪೆಟ್ರೋಲಿಯಂ ಆಮದು ನಿಲ್ಲಿಸಿದರೆ ಯೂರೋಪಿನಲ್ಲಿ ತೈಲ ಮತ್ತು ಅನಿಲ ಬೆಲೆ ದುಪ್ಪಟ್ಟಾಗುವುದೆಂದು ಅಂದಾಜಿಸಲಾಗಿದೆ.