ಮಾಸ್ಕೋ: ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮುಂದುವರೆಯುತ್ತಿದ್ದು, ರಷ್ಯಾ ಸೇನೆಯ ಕ್ಷಿಪಣಿ ದಾಳಿಯಿಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.
ಈ ವಿಚಾರವಾಗಿ ಮಾಹಿತಿ ನೀಡಿರುವ ಉಕ್ರೇನಿಯನ್ ನೌಕಾಪಡೆಯ ವಕ್ತಾರರಾದ ಡಿಮಿಟ್ರೋ ಪ್ಲೆಟೆನ್‌ಚುಕ್ ಅವರು, ಕ್ಷಿಪಣಿ ದಾಳಿ ಮತ್ತು ಆ ಬಳಿಕ ನಡೆದ ಸ್ಫೋಟದಲ್ಲಿ ಐದು ಮಂದಿ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಸಿಎನ್‌ಎನ್ ಪ್ರಕಾರ, ಕ್ಷಿಪಣಿ ಸ್ಫೋಟದ ಸಾಮೀಪ್ಯದ ಹೊರತಾಗಿಯೂ ಜೆಲೆನ್ಸ್ಕಿ ಮತ್ತು ಮಿಟ್ಸೊಟಾಕಿಸ್ ಇಬ್ಬರೂ ಹಾನಿಗೊಳಗಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ಮಾಡಿದೆ.