ಕಾಂಗ್ರೆಸ್ ಮಾಜಿ ಸಿಎಂ ಪುತ್ರಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ

Prasthutha|

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗುವುದು ಮಾತ್ರ ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಯ ಪುತ್ರಿಯೊಬ್ಬರು ಭಾರತೀಯ ಜನತಾ ಪಾರ್ಟಿ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ಉನ್ನತ ನಾಯಕರಾಗಿದ್ದ ಮತ್ತು ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆ. ಕರುಣಾಕರನ್ ಪುತ್ರಿ ಪದ್ಮಜಾ ವೇಣುಗೋಪಾಲ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.

- Advertisement -

ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಪದ್ಮಜಾ ವೇಣುಗೋಪಾಲ್, ಇಷ್ಟು ವರ್ಷ ಕಾಂಗ್ರೆಸ್‌ನಲ್ಲಿ ನೆಮ್ಮದಿ ಇರಲಿಲ್ಲ. ಹೈಕಮಾಂಡ್‌ಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ. ನನ್ನ ತಂದೆಯವರೂ ಅದೇ ರೀತಿ ಆಗಿತ್ತು. ತಂದೆಯವರು ಅಸಮಾಧಾನಗೊಂಡಿದ್ದರು ಎಂದು ಹೇಳಿದ್ದಾರೆ.

ಕೇರಳದ ಮಾಜಿ ಸಿಎಂ ಪುತ್ರ ಪದ್ಮಜಾ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳೀ ಬಂದಿದ್ದವು. ಈ ವರದಿಗಳನ್ನು ತಳ್ಳಿ ಹಾಕಿದ್ದ ಅವರು ಫೇಸ್‌ಬುಕ್ ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಬಿಜೆಪಿ ಸೇರ್ಪಡೆ ಅಧಿಕೃತವಾಗುವ ಮೊದಲೇ ಅವರು ಫೇಸ್‌ಬುಕ್‌ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

- Advertisement -

ಸಹೋದರಿಯ ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಪದ್ಮಜಾ ಅವರ ಸಹೋದರ ಮತ್ತು ಕಾಂಗ್ರೆಸ್ ಸಂಸದ ಕೆ.ಮುರಳೀಧರನ್ , ಈ ನಿರ್ಧಾರದ ಮೂಲಕ ಪದ್ಮಜಾ ಅವರು ದ್ರೋಹ ಮಾಡಿದ್ದಾರೆ. ಅವರ ಸೇರ್ಪಡೆಯಿಂದ ಬಿಜೆಪಿಗೆ ಏನು ಪ್ರಯೋಜನವಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ತಂದೆ ಕರುಣಾಕರನ್ ಅವರು ಎಂದಿಗೂ ಕೋಮುವಾದದೊಂದಿಗೆ ರಾಜಿ ಮಾಡಿಕೊಂಡಿಲ್ಲ. ಜಾತ್ಯತೀತ ಮನೋಭಾವವುಳ್ಳ ಜನರು ಅವರ ಕುಟುಂಬದ ಸದಸ್ಯ ಬಿಜೆಪಿಗೆ ಸೇರಿರುವುದು ದುಃಖಕರ ಎಂದು ಸಹೋದರಿಯ ಬಿಜೆಪಿ ಸೇರ್ಪಡೆಗೆ ಅವರು ಅಸಮಾಧಾನ ಹೊರ ಹಾಕಿದ್ದಾರೆ.



Join Whatsapp