ಉಕ್ರೇನ್ ನ ಮಸೀದಿಯನ್ನು ಗುರಿಪಡಿಸಿ ರಷ್ಯಾ ಶೆಲ್ ದಾಳಿ

Prasthutha|

ಮಾರಿಯೋಪೋಲ್: ರಷ್ಯಾ – ಉಕ್ರೇನ್ ನಡುವಿನ ಯುದ್ಧ ಸಂಘರ್ಷ ಹದಿನೇಳನೇ ದಿನವು ಮುಂದುವರೆದಿದ್ದು ಇಂದು ದಕ್ಷಿಣ ಉಕ್ರೇನ್‌ನ ಮಾರಿಯೋಪೋಲ್ನ ಮಸೀದಿಯೊಂದರ ಮೇಲೆ ರಷ್ಯಾ ಶೆಲ್ ದಾಳಿ ನಡೆಸಿರುವುದಾಗಿ ವರದಿಯಾಗಿದೆ.ರಷ್ಯಾ ಪಡೆಗಳು ಮಸೀದಿಯನ್ನು ಗುರಿಪಡಿಸಿ ದಾಳಿ ನಡೆಸಿರುವುದಾಗಿ ಉಕ್ರೇನ್‌ ವಿದೇಶಾಂಗ ಸಚಿವಾಲಯ ಹೇಳಿದೆ.

- Advertisement -

ದಾಳಿಗೊಳಗಾದ ಮಸೀದಿಯಲ್ಲಿ 80 ಕ್ಕೂ ಅಧಿಕ ಮಂದಿ ಆಶ್ರಯ ಪಡೆಯುತ್ತಿದ್ದರು ಎನ್ನಲಾಗಿದ್ದು ಸಾವುನೋವುಗಳ ಕುರಿತು ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂದು ಉಕ್ರೇನ್‌ ಸರ್ಕಾರ ತಿಳಿಸಿದೆ. ರಷ್ಯಾ ಪಡೆಗಳು ಮಾರಿಯುಪೋಲ್‌ನಿಂದ ನಾಗರಿಕರನ್ನು ಹೊರಗೆ ಬಿಡಲು ನಿರಾಕರಿಸಿದೆ ಎಂದು ಇದೇ ವೇಳೆ ಉಕ್ರೇನ್ ಆರೋಪಿಸಿದೆ.

ಸರಿಸುಮಾರು 4,50,000 ಜನಸಂಖ್ಯೆ ಇರುವ ಮಾರಿಯುಪೋಲ್‌ ಮೇಲೆ ರಷ್ಯಾ ಪಡೆಗಳು ಶೆಲ್‌ ದಾಳಿ ನಡೆಸುತ್ತಿದೆ.



Join Whatsapp