‘ರೂಪಾಯಿ ಕುಸಿಯುತ್ತಿಲ್ಲ, ಡಾಲರ್ ಬಲಗೊಳ್ಳುತ್ತಿದೆ’: ನಿರ್ಮಲ ಸೀತಾರಾಮನ್ ಹೇಳಿಕೆ, ಟ್ರೋಲ್ ಮೇಲೆ ಟ್ರೋಲ್

Prasthutha|

ಹಣಕಾಸು ಮಂತ್ರಿ ಮೋದಿ ಸ್ಕೂಲ್ ಆಫ್ ಲಾಜಿಕ್ ನ ವಿದ್ಯಾರ್ಥಿ ಎಂದ ಆಪ್

- Advertisement -

ನವದೆಹಲಿ: ಅಮೆರಿಕನ್ ಡಾಲರ್ ಎದುರು ಸಾರ್ವತ್ರಿಕವಾಗಿ ಕುಸಿತ ಕಾಣುತ್ತಿರುವ ರೂಪಾಯಿ ಮೌಲ್ಯ ಮತ್ತೆ 82.38 ಕ್ಕೆ ಕುಸಿದಿದೆ. ಈ ಐತಿಹಾಸಿಕ ಕುಸಿತದ ಕುರಿತು ಕೇಂದ್ರ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮನ್ ನೀಡಿರುವ ಹೇಳಿಕೆ ಇದೀಗ ವ್ಯಾಪಕ ಟ್ರೋಲ್ ಗೆ ಗುರಿಯಾಗಿದೆ.

ರೂಪಾಯಿ ಕುಸಿಯುತ್ತಿಲ್ಲ , ಡಾಲರ್ ಬಲಗೊಳ್ಳುತ್ತಿದೆ ಎಂದು ಅಮೆರಿಕದ ವಾಷಿಂಗ್ಟನ್ ನಲ್ಲಿ ಮಾಧ್ಯಮಗಳ ಮೂಲಕ ನಿರ್ಮಲ ಸೀತಾರಾಮನ್ ಈ ರೀತಿ ಹೇಳಿಕೆ ನೀಡಿದ್ದು, ಇದನ್ನು ಬಿಜೆಪಿ ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ವಿಪಕ್ಷಗಳು ಸಹಿತ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯ ಮಾಡಿದ್ದಾರೆ.

- Advertisement -

ಸಚಿವರ ಹೇಳಿಕೆಗೆ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು ನಾವು ಪಂದ್ಯ ಸೋತಿಲ್ಲ, ಅವರು ಗೆದ್ದಿದ್ದಾರಷ್ಟೇ. ಶುಭಾಶಯಗಳು ಜೆ ಎನ್ ಯು ವಿಫಲವಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಡಿಎಂಕೆ ನಾಯಕರಾದ ಇಸೈ ಅವರು, ಸಚಿವರ ಈ ಹೇಳಿಕೆಗೆ ಅವರು ಅರ್ಥಶಾಸ್ತ್ರದ ನೋಬೆಲ್ ಪಡೆಯಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.

ಆಪ್ ಪಕ್ಷ ನಿರ್ಮಲಾ ಸೀತರಾಮನ್ ಹೇಳಿಕೆ ಜೊತೆ ಮೋದಿಯನ್ನು ಕಾಲೆಳೆದಿದ್ದು ತಾಪಮಾನ ಬದಲಾವಣೆಗೆ ಮೋದಿ ಕೊಟ್ಟ ಉತ್ತರ ಮತ್ತು ಇದೀಗ ಆರ್ಥಿಕ ಪರಿಸ್ಥಿತಿ ಬಗ್ಗೆ ಸೀತಾರಾಮಾನ್ ಹೇಳಿಕೆ ಎರಡೂ ಒಂದೇ ರೀತಿಯದ್ದು. ಸೀತಾರಾಮನ್ ,ಮೋದಿ ಅವರ ‘ಸ್ಕೂಲ್ ಆಫ್ ಲಾಜಿಕ್‌’ನ ಹೆಮ್ಮೆಯ ವಿದ್ಯಾರ್ಥಿ” ಎಂದು ವಿಡಿಯೊವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಈ ಹಿಂದೆ ವೈರಲ್ ಆದ ತಾಪಮಾನ ಬದಲಾಗಿಲ್ಲ, ನಾವು ಬದಲಾಗಿದ್ದೇವೆ ಎಂಬ ಪ್ರಧಾನೊಯ ಹೇಳಿಕೆಯನ್ನೂ ಸೇರಿಸಿ ಸಚಿವರನ್ನು ಟ್ರೋಲ್ ಮಾಡಿದೆ.

ಬಿಆರ್‌ಎಸ್‌ ಪಕ್ಷದ ಐಟಿ ಮುಖ್ಯಸ್ಥ ಯತೀಶ್‌ ರೆಡ್ಡಿ ಅವರು, ‘‘ಭೂಮಿಯ ಮೇಲೆ ರೂಪಾಯಿ ಗಟ್ಟಿಯಾಗಿದೆ, ಡಾಲರ್ ಏರುತ್ತಿದೆ’’ ಎಂದು ವ್ಯಂಗ್ಯಚಿತ್ರವೊಂದನ್ನು ಹಂಚಿಕೊಂಡಿದ್ದಾರೆ

ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ವ್ಯಂಗ್ಯ ಚಿತ್ರ ಬರೆದಿದ್ದು, ಕೋಚ್ ನಿರ್ಮಲಾ ಸೀತಾರಾಮನ್ ಎಂದು ಬರೆದಿದ್ದಾರೆ

ಹೀಗೆ ಕೇಂದ್ರ ಹಣಕಾಸು ಮಂತ್ರಿಯ ಈ ಹೇಳಿಕೆಗೆ ಟ್ರೋಲ್ ಗಳ ಮಹಾಪೂರವೇ ಎದ್ದಿದ್ದು ನಿರ್ಮಲಾ ಸೀತರಾಮನ್ ಅವರಿಗೆ ತೀವ್ರ ಮುಖಭಂಗವಾಗಿದೆ.



Join Whatsapp