ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿಲ್ಲ: ನಿರ್ಮಲಾ ಸೀತಾರಾಮನ್

Prasthutha|

- Advertisement -

ನವದೆಹಲಿ: ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿತ ಕಾಣುತ್ತಿರುವ ಕಳವಳದ ನಡುವೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರೂ. ಮೌಲ್ಯ ಕುಸಿಯುತ್ತಿಲ್ಲ. ಅದು ತನ್ನ ಸ್ವಾಭಾವಿಕ ಹಾದಿಯನ್ನು ಕಂಡುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಆರ್ಥಿಕ ಹಿಂಜರಿತ ಅಥವಾ ಆರ್ಥಿಕ ಹಿಂಜರಿತದ ಯಾವುದೇ ಅಪಾಯವನ್ನು ಭಾರತ ಎದುರಿಸುವುದಿಲ್ಲ, ಏಕೆಂದರೆ ಅದರ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು “ಪರಿಪೂರ್ಣವಾಗಿವೆ” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದರು.

- Advertisement -

ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಸ್ಥಳೀಯ ಕರೆನ್ಸಿ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಒಂದು ವೇಳೆ ಅಸ್ಥಿರತೆ ಕಂಡುಬಂದಲ್ಲಿ ಮಾತ್ರವೇ ಮಧ್ಯಪ್ರವೇಶಿಸುತ್ತದೆ ಎಂದು ತಿಳಿಸಿದರು. ಆರ್‌ಬಿಐ ಮಧ್ಯಸ್ಥಿಕೆಯಿಂದ ರೂ. ಮೌಲ್ಯದ ಏರಿಕೆ ಅಥವಾ ಇಳಿಕೆಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಅದು ಕೇವಲ ಅಸ್ಥಿರತೆಯನ್ನು ತಪ್ಪಿಸಲು ಹಾಗೂ ಅದರ ಹಾದಿಯನ್ನು ಕಂಡುಕೊಳ್ಳಲು ಅವಕಾಶ ನೀಡುತ್ತದೆ ಎಂದು ಹೇಳಿದರು. ಭಾರತೀಯ ರೂ. ತನ್ನ ಇತರ ದೇಶಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ವಾಸ್ತವವಾಗಿ ಭಾರತೀಯ ರೂಪಯಿಯನ್ನು ಇತರ ಕರೆನ್ಸಿಗಳಿಗೆ ಹೋಲಿಸಿದರೆ ಅದರ ಮೌಲ್ಯ ಹೆಚ್ಚಾಗಿರುವುದು ಕಂಡುಬರುತ್ತದೆ ಎಂದರು .



Join Whatsapp