ದುಬೈನಲ್ಲಿ ಉದ್ಯೋಗಾವಕಾಶ: ಆ.7ರಂದು ಸಂದರ್ಶನ

Prasthutha|

ಮಂಗಳೂರು: ಅಂತಾರಾಷ್ಟ್ರೀಯ ವಲಸಿಗರ ಕೇಂದ್ರದಿಂದ ದುಬೈನ ಪ್ರತಿಷ್ಠಿತ ಕಂಪನಿಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಐ.ಎಂ.ಸಿ-ಕೆ.ಯು ಇದೇ ಆ.07 ರಂದು ಕಲಬುರಗಿ ಜಿಲ್ಲೆಯಲ್ಲಿ ಸಂದರ್ಶನ ಏರ್ಪಡಿಸಿದೆ.

- Advertisement -

 2 ವರ್ಷಕ್ಕಿಂತ ಹೆಚ್ಚು ಅನುಭವವುಳ್ಳ 24 ರಿಂದ 32 ವರ್ಷ ವಯೋಮಿತಿಯ ಹಾಗೂ ಹೊಸದಾಗಿ ಉದ್ಯೋಗಕ್ಕೆ ಸೇರುವ 18 ರಿಂದ 23 ವರ್ಷಗಳ ವಯೋಮಿತಿಯ ನುರಿತ ಟೈಲ್ಸ್ ಮೆಸ್ತ್ರೀ ಹಾಗೂ ಬ್ಲೋಕ್ ಮೆಸ್ತ್ರೀಗಳು ಸಂದರ್ಶನದಲ್ಲಿ ಭಾಗವಹಿಸಬಹುದು.

      ಆಸಕ್ತರು ಆ.4 ರಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, 2ನೇ ಮಹಡಿ, ಉರ್ವ ಮಾರುಕಟ್ಟೆ ಕಟ್ಟಡ, ಉರ್ವ ಮಾರುಕಟ್ಟೆ, ಮಂಗಳೂರು, ಇಲ್ಲಿ ನೋಂದಾಯಿಸಿಕೊಳ್ಳಬೇಕು.

- Advertisement -

       ತಿಂಗಳಿಗೆ 30,000 ರೂ. ವೇತನ ನಿಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್:9110248485 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp