ಆರ್‌.ಎಸ್‌.ಎಸ್‌ ಕಾರ್ಯಕರ್ತನ ಕಾರಿನ ಮೇಲಿನ ಬರಹ ಪ್ರಕರಣ; ಇಬ್ಬರು ಅಪ್ರಾಪ್ತ ಬಾಲಕರ ಬಂಧನ

ಚಿಕ್ಕಮಗಳೂರು: ಕಡೂರು ಪಟ್ಟಣದಲ್ಲಿ ಆರ್‌.ಎಸ್‌.ಎಸ್‌ ಕಾರ್ಯಕರ್ತ  ಡಾ.ಶಶಿಧರ್ ಚಿಂದಿಗೆರೆ ಜಯಣ್ಣ ಅವರ ಕಾರಿನ ಮೇಲೆ ಬರೆದ ಪ್ರಕರಣದ ಆರೋಪಿಗಳಾದ  ಇಬ್ಬರು ಅಪ್ರಾಪ್ತ ಬಾಲಕರನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.

ಕಡೂರು ಪಟ್ಟಣದ ಲಕ್ಷ್ಮೀಶನಗರದ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಕಿಲ್ ಯೂ, ಜಿಹಾದಿ, ಹಾಗೂ ಅಶ್ಲೀಲ ಪದಗಳನ್ನು ಬರೆಯುವ ಮೂಲಕ ಸಮಾಜದ ಸ್ವಾಸ್ಥ್ಯ ಕದಡಲು ಯತ್ನಿಸಿದ್ದ ಆರೋಪಿಗಳ ಮೇಲೆ ಐಪಿಸಿ 427, 505 (2), 506 ಪ್ರಕರಣ ದಾಖಲಾಗಿದೆ.

- Advertisement -

ಇಂತಹಾ ಕಾರನ್ನ ಕೊಳ್ಳಲು ಆಗುವುದಿಲ್ಲ ಎಂದು ಕಲ್ಲಿನಿಂದ ಗೀಚಿದ್ದೇವೆ ಎಂದು ವಿಚಾರಣೆಯ ವೇಳೆ ಬಾಲಕರು ತಿಳಿಸಿದ್ದಾರೆ.