ಧ್ವಜ ಹರಿದ ಆರೆಸ್ಸೆಸ್ ಕಾರ್ಯಕರ್ತನಿಗೆ ಪೋರ್ಚುಗಲ್ ಅಭಿಮಾನಿಗಳು ಕ್ರೂರವಾಗಿ ಥಳಿಸಿದ್ದಾರೆಯೇ?

Prasthutha|

►ಫ್ಯಾಕ್ಟ್ ಚೆಕ್

- Advertisement -

ಕಣ್ಣೂರು: ಇಲ್ಲಿನ ಪಾಣೂರ್ ಎಂಬಲ್ಲಿ ಪೋರ್ಚುಗೀಸ್ ಧ್ವಜವನ್ನು SDPI ಧ್ವಜ ಎಂದು ಭಾವಿಸಿ ಆರೆಸ್ಸೆಸ್ ಕಾರ್ಯಕರ್ತನೊಬ್ಬನು ಹರಿದು ಹಾಕಿರುವ ಘಟನೆಯ ವೀಡಿಯೋ ವೈರಲ್ ಆಗಿತ್ತು.

 ನಿನ್ನೆ ಪೋರ್ಚುಗೀಸ್ ಧ್ವಜವನ್ನು ನಾಶಪಡಿಸಿದ್ದ ದೀಪಕ್ ಎಂಬ ಆರೆಸ್ಸೆಸ್ ಕಾರ್ಯಕರ್ತನನ್ನು ಕ್ರೂರವಾಗಿ ಥಳಿಸಲಾಗಿದ್ದು, ಗಾಯಾಳುವನ್ನು ತಲಶ್ಶೇರಿಯ ಇಂದಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವದಂತಿ ವ್ಯಾಪಕವಾಗಿ ಹರಿದಾಡುತ್ತಿತ್ತು. ತಲೆಗೆ ಗಂಭೀರ ಗಾಯಗಳಾಗಿ ರಕ್ತಸ್ರಾವವಾಗುತ್ತಿರುವ ವ್ಯಕ್ತಿಯ ಫೋಟೋ ಕೂಡಾ ಇದರ ಜೊತೆಗೆ ಹರಿಯಬಿಡಲಾಗಿತ್ತು.  

- Advertisement -

ಈ ಕುರಿತು ಪ್ರತಿಕ್ರಿಯಿಸಿದ ಪಾನೂರು ಪೊಲೀಸರು, ಧ್ವಜ ಹರಿದ ಬಗ್ಗೆ ಪ್ರಕರಣ ದಾಖಲಾಗಿದೆಯೇ ಹೊರತು ಥಳಿಸಿದ ಬಗ್ಗೆ ಮಾಹಿತಿ ಬಂದಿಲ್ಲ. ಪೋರ್ಚುಗಲ್ ಅಭಿಮಾನಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಧ್ವಜವನ್ನು ಧ್ವಂಸಗೈದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಥಳಿಸಿರುವ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿದ ತಲಶ್ಶೇರಿಯ ಇಂದಿರಾ ಆಸ್ಪತ್ರೆಯ ಅದಿಕಾರಿಗಳು, ಗಂಭೀರ ಗಾಯಗೊಂಡ ಆರೆಸ್ಸೆಸ್ ಕಾರ್ಯಕರ್ತನನ್ನು ಇಂದಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸಂದೇಶಗಳು ಹರಿದಾಡುತ್ತಿದೆ. ಪಾಣೂರು ಕಡೆಯಿಂದ ಇಂದು ಯಾರೊಬ್ಬರೂ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

Join Whatsapp