RSS ಎಂದೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿರಲಿಲ್ಲ: ಉದ್ಧವ್ ಠಾಕ್ರೆ

Prasthutha|

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿರಲಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

- Advertisement -

ಬಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಅವರು, ನಿಮ್ಮ ಮಾತೃಸಂಸ್ಥೆ ಆರೆಸ್ಸೆಸ್ ಎಂದೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿರಲಿಲ್ಲ. ನನ್ನ ಅಜ್ಜ ರಚಿಸಿದ ಸಂಯುಕ್ತ ಮಹಾರಾಷ್ಟ್ರ ಚಳವಳಿಗೆ ನಮ್ಮ ತಂದೆ ಹಾಗೂ ಅವರ ಸಹೋದರ ಶ್ರೀಕಾಂತ್ ನೆರವು ನೀಡಿದರು. ಆದರೆ ಅವರನ್ನು ಹೊರಗಟ್ಟಿದವರು ಯಾರು ಎಂದು ನಿಮಗೆ ಗೊತ್ತು. ಭಾರತೀಯ ಜನಸಂಘ ಎಂದು ಸಿಎಂ ಹೇಳಿದರು.

ನಕಲಿ ಹಿಂದುತ್ವ ಪಕ್ಷ ಇಡೀ ದೇಶವನ್ನೇ ದಿಕ್ಕು ತಪ್ಪಿಸುತ್ತಿದೆ. ದೇವೇಂದ್ರ ಫಡ್ನವೀಸ್ ಬಿಜೆಪಿಯ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ನಿಮ್ಮನ್ನು ಹೊರಗಟ್ಟಿದ್ದೇವೆ. ಅವರು ತಾವೇ ಹಿಂದುತ್ವದ ಸಂರಕ್ಷಕರು ಎಂದು ಭಾವಿಸಿಕೊಂಡಿದ್ದಾರೆ. ಇಲ್ಲಿರುವ ಜನ ಏನು? ಅವರು ಯಾರು? ಪ್ರಶ್ನಿಸಿದರು.



Join Whatsapp