ಗಲಭೆಗಳಿಗೆ ಆರ್‌ಎಸ್‌ಎಸ್ ಯೋಜನೆ| ಸಮಗ್ರ ತನಿಖೆಗೆ ಪಾಪ್ಯುಲರ್ ಫ್ರಂಟ್ ಆಗ್ರಹ

Prasthutha|

- Advertisement -

ಕೊಚ್ಚಿ: ಕೇರಳದಲ್ಲಿ ದೊಡ್ಡ ಗಲಭೆ ಸೃಷ್ಟಿಸಲು ಆರ್‌ಎಸ್‌ಎಸ್ ಮತ್ತು ಅದರ ಪೋಷಕ ಸಂಘಟನೆಗಳು ಸಜ್ಜಾಗುತ್ತಿವೆ ಮತ್ತು ವಿವಿಧ ಭಾಗಗಳಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸಿಎ ರೌಫ್, ಎರ್ನಾಕುಲಂ ವಲಯ ಅಧ್ಯಕ್ಷ ಕೆ.ಕೆ. ಹುಸೈರ್ ಮತ್ತು ಎರ್ನಾಕುಲಂ ಜಿಲ್ಲಾಧ್ಯಕ್ಷ ವಿ.ಕೆ. ಸಲೀಮ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

- Advertisement -

ಆರ್‌ಎಸ್‌ಎಸ್ ನಿಯಂತ್ರಣದಲ್ಲಿರುವ ಶಾಲೆಗಳು, ದೇವಾಲಯಗಳು ಮತ್ತು ಸೇವಾ ಕೇಂದ್ರಗಳೆಲ್ಲಾ ಶಸ್ತ್ರಾಸ್ತ್ರಗಳ ಮನೆಯಾಗಿ ಮಾರ್ಪಟ್ಟಿದೆ. ಆರ್‌ಎಸ್‌ಎಸ್ ಕೇಂದ್ರಗಳಿಂದ ವಶಪಡಿಸಿಕೊಳ್ಳುತ್ತಿರುವ ಶಸ್ತ್ರಾಸ್ತ್ರಗಳು  ಮತ್ತು ಆರ್‌ಎಸ್‌ಎಸ್ ನಾಯಕರು ಸಾರ್ವಜನಿಕವಾಗಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಾಣಲು ಸಾಧ್ಯವಾಗುತ್ತಿದೆ. ನಿನ್ನೆ ಆರ್‌ಎಸ್‌ಎಸ್ ನಿಯಂತ್ರಿತ ಸಂಸ್ಥೆಯ ಆಂಬುಲೆನ್ಸ್‌ನಿಂದ ಬಂದೂಕನ್ನು ವಶಪಡಿಸಿಕೊಳ್ಳಲಾಗಿತ್ತು. ಆರ್‌ಎಸ್‌ಎಸ್ ಮತ್ತು ಅದರ ಪೋಷಕ ಸಂಘಟನೆಗಳು ರಾಜ್ಯದಲ್ಲಿ  ಸೇವಾ ಚಟುವಟಿಕೆಗಳ ಸೋಗಿನಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಇದು ಖಚಿತಪಡಿಸುತ್ತದೆ.

ಈ ಹಿಂದೆ, ಕೇರಳದಲ್ಲಿ ಸಂಘ ಪರಿವಾರದ ನಾಯಕರು ಪೂಜೆಗೆ ಬಂದೂಕುಗಳು ಮತ್ತು ದೊಡ್ಡ ದೊಡ್ಡ ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾಯಕರು ಹೇಳಿದ್ದಾರೆ. ಆರ್‌ಎಸ್‌ಎಸ್‌ನ ಪೋಷಕ ಸಂಘಟನೆಯಾದ ಸೇವಾ ಭಾರತಿ ನಡೆಸುತ್ತಿರುವ ಪರವೂರಿನಲ್ಲಿರುವ ಅಂಬಾಟಿ ಸೇವಾ ಕೇಂದ್ರದ ಅಧೀನದಲ್ಲಿರುವ ಆಂಬ್ಯುಲೆನ್ಸ್‌ನಿಂದ ಬಂದೂಕನ್ನು ವಶಪಡಿಸಲಾಗಿತ್ತು. ಆರ್‌ಎಸ್‌ಎಸ್ ಅಂಬಾಟಿಯನ್ನು ಮಕ್ಕಳ ಕೇಂದ್ರವಾಗಿ ಪರಿಚಯಿಸುತ್ತದೆ. ಚಿಕ್ಕ ಮಕ್ಕಳಲ್ಲಿ ಕೋಮುವಾದದ ವಿಷ ಬೀಜವನ್ನು ಬಿತ್ತಿ ಅವರನ್ನು ಶಸ್ತ್ರಸಜ್ಜಿತಗೊಳಿಸಲು ಆರೆಸ್ಸೆಸ್ ಯೋಜನೆ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.

Join Whatsapp