ಲೇಹ್: ಸರ್ಕಾರದ ಪ್ರತಿ ಸಂಸ್ಥೆಯಲ್ಲೂ ಆರ್ ಎಸ್ ಎಸ್ ತನ್ನ ಜನರನ್ನು ಇರಿಸುತ್ತಿದೆ, ಅವರ ಮೂಲಕ ಎಲ್ಲವನ್ನೂ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಮೊದಲ ಬಾರಿಗೆ ಲಡಾಖ್ ಗೆ ಭೇಟಿ ನೀಡಿರುವ ಅವರು ಲೇಹ್ ನಲ್ಲಿ ಯುವಕರೊಂದಿಗೆ ಸಂವಾದ ನಡೆಸಿದ್ದಾರೆ. ಈ ಸಂವಾದದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವಿರುದ್ಧ ಕಿಡಿಕಾರಿದ್ದಾರೆ.
ನೀವು ಕೇಂದ್ರ ಸರ್ಕಾರದ ಯಾವುದೇ ಸಚಿವರನ್ನು ಕೇಳಿದರೂ, ಅವರು ನಿಜವಾಗಿಯೂ ತಮ್ಮ ಸಚಿವಾಲಯಗಳನ್ನ ನಡೆಸುತ್ತಿಲ್ಲ ಎಂದೇ ನಿಮಗೆ ಹೇಳುತ್ತಾರೆ. ಆರ್ ಎಸ್ ಎಸ್ ನಿಂದ ನಿಯೋಜಿತವಾದ ವ್ಯಕ್ತಿಗಳು ವಾಸ್ತವವಾಗಿ ಈ ಸಚಿವಾಲಯಗಳನ್ನು ನಡೆಸುತ್ತಿದ್ದಾರೆ. ಅವರೇ ಏನು ಮಾಡಬೇಕೆಂದು ಅವರೇ ಸೂಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.