“ಆರೆಸ್ಸೆಸ್: ಆಳ ಮತ್ತು ಅಗಲ” ಕೃತಿ ಇಂಗ್ಲಿಷ್, ಮಲಯಾಳಂ ಸೇರಿ ಐದು ಭಾಷೆಗಳಿಗೆ ಅನುವಾದ

Prasthutha|

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್)ನ ನೈಜ ಉದ್ದೇಶ ಮತ್ತು ಕುತಂತ್ರವನ್ನು ಓದುಗರಿಗೆ ಬಹಳ ಸರಳ ರೀತಿಯಲ್ಲಿ ತಿಳಿಸಿಕೊಟ್ಟು ಅವರನ್ನು ಚಿಂತನೆಗೆ ಒಳಪಡಿಸುವ ನಾಡಿನ ಸಾಕ್ಷಿಪ್ರಜ್ಞೆ ಎಂದೆ ಕರೆಯಲ್ಪಡುವ ಸಾಹಿತಿ ದೇವನೂರು ಮಹಾದೇವ ಅವರು ಬರೆದ “ಆರ್ಎಸ್ಎಸ್: ಆಳ ಮತ್ತು ಅಗಲ” ಕೃತಿಗೆ ಇನ್ನಿಲ್ಲದ ಬೇಡಿಕೆ ಉಂಟಾಗಿದೆ. ಈ ಮಧ್ಯೆ ಪುಸ್ತಕ ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೂ ಅನುವಾದಗೊಳ್ಳುತ್ತಿದೆ.

- Advertisement -

64 ಪುಟಗಳ ಕಿರು ಪುಸ್ತಕದ ಬೆಲೆ 40 ರೂಪಾಯಿಯಾಗಿದೆ. ಪುಸ್ತಕ ಮುದ್ರಣ ಈ ತಿಂಗಳ ಅಂತ್ಯದಲ್ಲಿ ಒಂದು ಲಕ್ಷ ಗಡಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಪುಸ್ತಕದ ಅನುವಾದಕ್ಕಾಗಿ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಪ್ರಕಾಶಕರು ಮುಂದೆ ಬಂದಿದ್ದು, ಅನುವಾದಗಳು ನಡೆಯುತ್ತಿವೆ. ತಮಿಳು ಭಾಷೆಗೆ ಬರಹಗಾರರಾದ ಕನಕರಾಜು ಅನುವಾದ ಮಾಡುತ್ತಿದ್ದು, ತಮಿಳುನಾಡಿನ ಯಾವರೂಂ ಪ್ರಕಾಶನ ಸಂಸ್ಥೆ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.



Join Whatsapp