ಕ್ರಿಶ್ಚಿಯನ್ ಪಾದ್ರಿಗಳ ಲೈಂಗಿಕ ಕಿರುಕುಳದ ಬಗ್ಗೆ ವಿಶೇಷ ತನಿಖೆಗೆ RSS ಒತ್ತಾಯ

Prasthutha|

ಹೊಸದಿಲ್ಲಿ: ಭಾರತದಲ್ಲಿ ಕ್ರೈಸ್ತ ಪಾದ್ರಿಗಳ ಲೈಂಗಿಕ ಕಿರುಕುಳದ ಬಗ್ಗೆ ಪ್ರತ್ಯೇಕ ತನಿಖೆ ನಡೆಸುವಂತೆ RSS ವಾರಪತ್ರಿಕೆ ಪಾಂಚಜನ್ಯದಲ್ಲಿ ಒತ್ತಾಯಿಸಲಾಗಿದೆ.

- Advertisement -

ಪ್ರಪಂಚದಾದ್ಯಂತ ಇಂತಹ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ವಿಶೇಷ ತನಿಖೆಗೆ ವಾರಪತ್ರಿಕೆಯ ಹೊಸ ಸಂಚಿಕೆಯ ಮುಖಪುಟದಲ್ಲಿ ಒತ್ತಾಯಿಸಲಾಗಿದೆ. 1950 ರಿಂದ ಫ್ರಾನ್ಸ್‌ನ ಕೆಥೋಲಿಕ್ ಚರ್ಚುಗಳ ಪಾದ್ರಿಗಳಿಂದ 3,00,000 ಕ್ಕೂ ಹೆಚ್ಚು ಮಕ್ಕಳು ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ವರದಿಯಾಗಿತ್ತು.


ಸಂತ್ರಸ್ತರಲ್ಲಿ ಹೆಚ್ಚಿನವರು 10 ರಿಂದ 13 ವರ್ಷದೊಳಗಿನ ಗಂಡು ಮಕ್ಕಳಾಗಿದ್ದು, ಕ್ಯಾಥೊಲಿಕ್ ಚರ್ಚ್ ಸಂತ್ರಸ್ತರ ಬಗ್ಗೆ ಅವಮಾನಕರ ನಿಲುವನ್ನು ತೆಗೆದುಕೊಂಡಿದೆ ಎಂದು ವರದಿ ತಿಳಿಸಿದೆ. ವರದಿಯನ್ನು ತಿಳಿದು ಪೋಪ್ ಫ್ರಾನ್ಸಿಸ್ ತುಂಬಾ ದುಃಖಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಪಾಂಚಜನ್ಯ ವಿಶೇಷ ತನಿಖೆಗೆ ಆಗ್ರಹಿಸಿದೆ. ಭಾರತದಲ್ಲೂ ಇಂತಹ ಅನೇಕ ಪ್ರಕರಣಗಳು ನಡೆಯುತ್ತಿದ್ದು, ಜಾರ್ಖಂಡ್ ಮತ್ತು ಕೇರಳದಲ್ಲಿ ಹಲವು ರೀತಿಯ ಘಟನೆಗಳು ನಡೆದಿವೆ ಎಂದು ಅದು ಹೇಳಿದೆ.

- Advertisement -

ಕೇರಳದಲ್ಲಿ ಕ್ರೈಸ್ತ ಸನ್ಯಾಸಿನಿಯರ ಸಂಖ್ಯೆ ಶೇಕಡಾ 25 ಕ್ಕೆ ಇಳಿದಿದ್ದು, ಅದಕ್ಕಾಗಿಯೇ ಛತ್ತೀಸ್‌ಗಡ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಒಡಿಶಾದಂತಹ ಬಡ ಹುಡುಗಿಯರನ್ನು ವಂಚಿಸಿ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಪಾಂಚಜನ್ಯ ಆರೋಪಿಸಿದೆ.



Join Whatsapp