ಹೈದರಾಬಾದ್: ತೆಲುಗು ಚಿತ್ರರಂಗದ ಮೂವಿ ಆರ್ಟಿಸ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಸೋಲು ಅನುಭವಿಸಿದ್ದಾರೆ.
ಇವರ ಪ್ರತಿಸ್ಪರ್ಧಿ ನಟ ಮಂಚು ವಿಷ್ಣು ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದು, MAA ನ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಿಷ್ಣು ಅವರು ಪ್ರತಿಸ್ಪರ್ಧಿ ಪ್ರಕಾಶ್ ರಾಜ್ ಅವರನ್ನು 106 ಮತಗಳಿಂದ ಸೋಲಿಸಿದರು. ವಿಷ್ಣು 380 ಮತಗಳನ್ನು ಪಡೆದರೆ, ಪ್ರಕಾಶ್ ರಾಜ್ ಅವರು 274 ಮತಗಳನ್ನು ಪಡೆದುಕೊಂಡಿದ್ದಾರೆ.
ಮಂಚು ವಿಷ್ಣು ತನ್ನ ಚುನಾವಣೆಯ ಪ್ರಚಾರದಲ್ಲಿ ನಟ ಪ್ರಕಾಶ್ ರಾಜ್ ಅವರನ್ನು ಹೊರಗಿನಿಂದ ಬಂದವರು ಎಂದು ಪ್ರತಿಬಿಂಬಿಸಿದ್ದರು. ಈ ಅಂಶವು ವಿಷ್ಣುವಿನ ಬಲವನ್ನು ಚುನಾವಣೆಯಲ್ಲಿ ಇನ್ನಷ್ಟು ಹೆಚ್ಚಿಸಿತು ಮತ್ತು ಕೆಲಸ ಮಾಡಿತು ಎಂದು ಹೇಳಲಾಗುತ್ತಿದೆ.