ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ‘ರಾಷ್ಟ್ರ ಪಿತ’ ಎಂದ ಅಖಿಲ ಭಾರತ ಇಮಾಮ್ಸ್ ಸಂಘಟನೆಯ ಮುಖ್ಯ ಇಮಾಂ

Prasthutha|

►ಮಸೀದಿ, ಮದ್ರಸಾಕೆ ಭೇಟಿ ನೀಡಿ ಸಂವಾದ ನಡೆಸಿದ ಮೋಹನ್ ಭಾಗವತ್

ನವದೆಹಲಿ: ಆರೆಸ್ಸೆಸ್ ಮುಖ್ಯಸ್ಥ‌ ಮೋಹನ್ ಭಾಗವತ್ ಇಂದು ಕಸ್ತೂರ್ಬಾ ಗಾಂಧಿ ರಸ್ತೆಯಲ್ಲಿನ‌ ಮಸೀದಿಗೆ ಭೇಟಿ ನಿಡಿದ್ದು, ಅಲ್ಲಿನ ಇಮಾಮರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಅಖಿಲ ಭಾರತ ಇಮಾಮ್ಸ್ ಸಂಘಟನೆಯ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ, ಮೋಹನ್ ಭಾಗವತ್‌ರನ್ನು ರಾಷ್ಟ್ರಿಪಿತ ಹಾಗೂ ರಾಷ್ಟ್ರ‌ಋಷಿ ಎಂದು ಕೊಂಡಾಡಿದ್ದಾರೆ. ಅಲ್ಲದೇ ನಮ್ಮೆಲ್ಲರ ಡಿಎನ್‌ಎ ಒಂದೇ ಆಗಿದ್ದು, ದೇವರ ಆರಾಧನಾ ಕ್ರಮದಲ್ಲಷ್ಟೇ ವ್ಯತ್ಯಾಸ ಇದೆ ಎಂದು ಅವರು ಹೇಳಿದ್ದಾರೆ.

- Advertisement -

ಆ ಬಳಿಕ ಭಾಗವತ್ ಹಳೇ ದೆಹಲಿಯ ಆಝಾದ್ ಮಾರ್ಕೆಟ್‌ನ ತಜ್‌ವೀದುಲ್ ಕುರ್‌ಆನ್ ಮದ್ರಸಾಕ್ಕೆ ಭೇಟಿ ನೀಡಿದ್ದು, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಮದ್ರಸಾ ವಿದ್ಯಾರ್ಥಿಗಳಿಗೆ ಉಪದೇಶ ನೀಡಿದ ಭಾಗವತ್, ವಿದ್ಯಾರ್ಥಿಗಳು ರಾಷ್ಟ್ರದ ಭವಿಷ್ಯವಾಗಿದ್ದು, ಕಲಿಕೆಯ ಕಡೆ ಹೆಚ್ಚಿನ ಗಮನ ನೀಡಿ ಮತ್ತು ದೇಶಕ್ಕಾಗಿ ಕೆಲಸ ಮಾಡಿ ಎಂದು ಕರೆ ನೀಡಿದರು.

- Advertisement -