ಅಧಿಕಾರಕ್ಕಾಗಿ ಆರ್‌ ಎಸ್‌ ಎಸ್-ಬಿಜೆಪಿ ಮಣಿಪುರ ಮಾತ್ರವಲ್ಲ, ಇಡೀ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ: ರಾಹುಲ್ ಗಾಂಧಿ

Prasthutha|

►ನರೇಂದ್ರ ಮೋದಿ RSSನ ಪ್ರಧಾನ ಮಂತ್ರಿ

- Advertisement -


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೇವಲ ಆಯ್ದ ಜನರ ಪ್ರಧಾನಿಯಾಗಿದ್ದಾರೆ. ಆರ್‌ ಎಸ್ ಎಸ್‌ ನ ಪ್ರಧಾನಿಯಾಗಿದ್ದಾರೆ. ಮಣಿಪುರದ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ. ಅವರ ಧೋರಣೆಯಿಂದಾಗಿಯೇ ಮಣಿಪುರದಲ್ಲಿ ಸಂಘರ್ಷ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಧಿಕಾರಕ್ಕಾಗಿ ಆರ್‌ ಎಸ್‌ ಎಸ್-ಬಿಜೆಪಿ ಏನು ಬೇಕಾದರೂ ಮಾಡುತ್ತದೆ. ಮಣಿಪುರ ಮಾತ್ರವಲ್ಲ ಇಡೀ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.


ರಾಹುಲ್ ಗಾಂಧಿ ಅವರ ವಿಡಿಯೊ ಸಂದೇಶವನ್ನು ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.

- Advertisement -


ಮಣಿಪುರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಿಮಗೆ ಅರಿವಿದೆ. ಆದರೆ ಮಣಿಪುರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಒಂದೇ ಒಂದು ಮಾತು ಆಡದಿರುವುದು ಅಚ್ಚರಿಗೆ ಕಾರಣವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.


ಕನಿಷ್ಠ ಪಕ್ಷ ಪ್ರಧಾನಿ ಇಂಫಾಲ್‌ ಗೆ ಹೋಗಿ ಜನರ ಸಮಸ್ಯೆ ಆಲಿಸಬೇಕಿತ್ತು. ಹಿಂದೆಲ್ಲ ಪ್ರಧಾನಿಗಳು ಯಾವುದೇ ಅಹಿತಕರ ಘಟನೆ ನಡೆದಾಗ ಅಲ್ಲಿಗೆ ತೆರಳುತ್ತಿದ್ದರು. ಆದರೆ ಪ್ರಧಾನಿ ಮೋದಿ ಮಣಿಪುರದ ಬಗ್ಗೆ ಮೌನ ತಾಳಿದ್ದಾರೆ ಎಂದು ರಾಹುಲ್ ಆರೋಪಿಸಿದರು.


ದೇಶದಲ್ಲಿ ಆರ್‌ ಎಸ್‌ ಎಸ್-ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸೈದ್ಧಾಂತಿಕ ಹೋರಾಟ ನಡೆಯುತ್ತಿದೆ. ಸಂವಿಧಾನ ರಕ್ಷಣೆ, ದೇಶವನ್ನು ಒಗ್ಗೂಡಿಸುವುದು ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡುವುದು ಕಾಂಗ್ರೆಸ್ ಸಿದ್ಧಾಂತವಾಗಿದೆ. ಮತ್ತೊಂದೆಡೆ ಆರ್‌ ಎಸ್‌ ಎಸ್-ಬಿಜೆಪಿಯು ಆಯ್ದ ಜನರು ದೇಶವನ್ನು ನಡೆಸಬೇಕು, ದೇಶದ ಸಂಪತ್ತು ಅವರ ಕೈಯಲ್ಲಿರಬೇಕು ಎಂದು ಬಯಸುತ್ತದೆ ಎಂದು ಹೇಳಿದರು.



Join Whatsapp