ಉಡುಪಿ | ಶೌಚಾಲಯದಲ್ಲಿ ವಿಡಿಯೋ ಮಾಡಿರುವ ಬಗ್ಗೆ ಕುರುಹು ಲಭಿಸಿಲ್ಲ: ಕಾಲೇಜಿಗೆ ಭೇಟಿ ನೀಡಿದ ಬಳಿಕ ಖುಷ್ಬೂ ಹೇಳಿಕೆ

Prasthutha|

►ಸತ್ಯಾಂಶ ಹೊರಬರುವವರೆಗೆ ತಾಳ್ಮೆ ಇರಲಿ

- Advertisement -

ಉಡುಪಿ: ಉಡುಪಿ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಮಾಡಿರುವ ಬಗ್ಗೆ ಕುರುಹು ಲಭಿಸಿಲ್ಲ. ಸಂಪೂರ್ಣ ತನಿಖೆಯಾದ ಬಳಿಕ ಮಾಹಿತಿ ನೀಡಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಹೇಳಿದರು.


ಪ್ರಕರಣ ನಡೆದ ಕಾಲೇಜಿಗೆ ಭೇಟಿ ನೀಡಿದ ಅವರು, ಕಾಲೇಜು ಆಡಳಿತ ಮಂಡಳಿ, ಸಂತ್ರಸ್ತೆ ಮತ್ತು ಆರೋಪಿತ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

- Advertisement -


ಈ ಪ್ರಕರಣ ಎಷ್ಟು ದಿನ ಮುಂದೆ ಹೋಗುತ್ತದೆ ಎಂಬ ಮಾಹಿತಿಯಿಲ್ಲ. ಮತ್ತಷ್ಟು ತನಿಖೆ ನಡೆಸಲಾಗುವುದು. ಈ ಬಗ್ಗೆ ಯಾರೂ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಡಿ. ಸತ್ಯಾಂಶ ಹೊರಬರುವವರೆಗೆ ಎಲ್ಲರೂ ತಾಳ್ಮೆ ವಹಿಸುವುದು ಉತ್ತಮ ಎಂದು ಹೇಳಿದರು.

Join Whatsapp