ಪ.ಬಂಗಾಳ ಚುನಾವಣೆ: ಹೈದರಾಬಾದ್ ನಲ್ಲಿ ಆರೆಸ್ಸೆಸ್- ಬಿಜೆಪಿ ಸಂಯೋಜನಾ ಸಭೆ

Prasthutha|

ಹೊಸದಿಲ್ಲಿ: ಪಶ್ಚಿಮ ಬಂಗಾಳ ಚುನಾವಣೆಗೆ ಮುಂಚಿತವಾಗಿ ಭಾರತೀಯ ಜನತಾ ಪಾರ್ಟಿ (ಬಿ.ಜೆ.ಪಿ) ಮತ್ತು ಅದರ ಸೈದ್ಧಾಂತಿಕ ಮೂಲವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮಧ್ಯೆ ಜನವರಿ 5ರಿಂದ ಜನವರಿ 7ರ ತನಕ ಅಹ್ಮದಾಬಾದ್ ನಲ್ಲಿ ಸಂಯೋಜನಾ ಸಭೆ ನಡೆಯಲಿದೆಯೆಂದು ಮೂಲಗಳನ್ನು ಉಲ್ಲೇಖಿಸಿ ‘ಸಿಯಾಸತ್’ ವರದಿ ಮಾಡಿದೆ.
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಭಾಗವಹಿಸಲಿದ್ದಾರೆ.
ಕೆಲವು ಕೇಂದ್ರ ಸಚಿವರೂ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಇದು ಸರಕಾರದ ನಿರ್ವಹಣೆಯ ಕುರಿತು ಪರಿಶೀಲಿಸುವ ಸಭೆಯಾಗಿದ್ದು ಸಂಸದರು ಪಾಲ್ಗೊಳ್ಳಲಿದ್ದಾರೆ ಮತ್ತು ಮುಂಬರುವ ವರ್ಷಗಳಲ್ಲಿ ಏನನ್ನು ಮಾಡಬೇಕು ಎಂಬ ಕುರಿತು ಬುದ್ಧಿಪರೀಕ್ಷೆಗಳನ್ನೂ ಇದರಲ್ಲಿ ನಡೆಸಲಾಗುತ್ತದೆ.
ರೈತರ ಪ್ರತಿಭಟನೆ, ರೈತ ಮಸೂದೆಗಳು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮುಂತಾದೆಡೆ ನಡೆಯುವ ಚುನಾವಣೆಗಳ ಕುರಿತು ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Join Whatsapp