ಸಂಚಾರ ಉಲ್ಲಂಘನೆಯ ದಂಡಕ್ಕೆ ರಿಯಾಯಿತಿ: ಒಂದೇ ವಾರದಲ್ಲಿ 56 ಕೋಟಿ ರೂ.ಸಂಗ್ರಹ

Prasthutha|

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಶೇ. 50 ರಿಯಾಯಿತಿ ಲಾಭ ಪಡೆದಿರುವ ವಾಹನಗಳ ಮಾಲೀಕರು ಕಳೆದ 7 ದಿನಗಳಿಂದ 56 ಕೋಟಿ ಪಾವತಿಸಿದ್ದಾರೆ.
ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ಸಂಬಂಧಿಸಿದಂತೆ ಇಲ್ಲಿಯವರೆಗೆ 56 ಕೋಟಿಗೂ ಹೆಚ್ಚು ದಂಡ ಸಂಗ್ರಹಗೊಂಡಿದ್ದು ನಿನ್ನೆ ದಾಖಲೆ ಪ್ರಮಾಣದ 9,06,94,800 ರೂ ಪಾವತಿ ಮಾಡಲಾಗಿತ್ತು.

- Advertisement -


ಕಳೆದ ಫೆ. 3ರಂದು ಈ ವಿನಾಯಿತಿ ಜಾರಿಗೆ ಬಂದಿದ್ದು, ಮೊದಲ ದಿನವೇ 5,61,45,000 ರೂಪಾಯಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು. ಎರಡನೇ ದಿನ ಬರೋಬ್ಬರಿ 6,80,72,500 ರೂ. ದಂಡ ಸಂಗ್ರಹವಾಗಿತ್ತು.
ಮೂರನೇ ದಿನ 7,49,94,870 ರೂಗಳು ಸಂಗ್ರಹವಾದರೆ,ನಾಲ್ಕನೇ ದಿನ 9,57,12,420, ಸಂಗ್ರಹಗೊಂಡರೆ,ಐದನೇ ದಿನ 8,13,12,200 ಆರನೇ ದಿನವಾದ ನಿನ್ನೆ 9,06,94,800 ರೂ ಸಂಗ್ರಹಗೊಂಡು ಒಟ್ಟು ,51,85,40,531 ರೂ ಸಂಗ್ರಹವಾಗಿ 18,26,060 ಪ್ರಕರಣಗಳು ಇತ್ಯರ್ಥಗೊಂಡಿದ್ದು ಇಂದು ಬೆಳಿಗ್ಗೆಯಿಂದ ಮತ್ತೆ ದಂಡ ಪಾವತಿ ಬಿರುಸಿನಿಂದ ನಡೆಯುತ್ತಿದ್ದು ಅದು 56 ಕೋಟಿ ದಾಟಿದೆ.


ಸಂಚಾರ ನಿಯಮ ಉಲ್ಲಂಘನೆಯ ರಿಯಾಯಿತಿ ದಂಡ ಪಾವತಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು ನಿನ್ನೆ ಸಂಜೆ ವೇಳೆಗೆ 56 ಕೋಟಿ ಗೂ ಹೆಚ್ಚು ದಂಡ ಸಂಗ್ರಹಗೊಂಡಿದೆ.



Join Whatsapp