5 ರೂಪಾಯಿ ಕೆಲಸದ ಪ್ರಚಾರಕ್ಕೆ 5,000 ರೂ. ಖರ್ಚು ಮಾಡುತ್ತಿರುವ ಎಎಪಿ: ತೇಜಸ್ವಿ ಸೂರ್ಯ

Prasthutha|

ನವದೆಹಲಿ: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಅದರ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 5 ರೂಪಾಯಿ ಕೆಲಸದ ಪ್ರಚಾರಕ್ಕಾಗಿ 5,000 ರೂ.ಗಳನ್ನು ಖರ್ಚು ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

- Advertisement -

ಗುಜರಾತ್ ವಿಧಾನಸಭೆ ಚುನಾವಣೆ 2022 ರ ಪ್ರಯುಕ್ತ ಮೊದಲ ಬಾರಿಗೆ ಯುವಕರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ನಾವು 5000 ರೂಪಾಯಿ ಕೆಲಸ ಮಾಡಿ 50 ರೂಪಾಯಿಯನ್ನು ಪ್ರಚಾರದ ಕೆಲಸಕ್ಕೆ ಬಳಸುತ್ತೇವೆ. ಆದರೆ, ಎಎಪಿಯವರು ಒಂದು ಸಣ್ಣ ಕೆಲಸಕ್ಕೂ ಬೃಹತ್ ಹಣವನ್ನು ಖರ್ಚು ಮಾಡುತ್ತಾರೆ. ನೀವು ಅಂತಹ ಜನರ ಬಗ್ಗೆ ಜಾಗರೂಕರಾಗಿರಬೇಕು. ಅವರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದಲ್ಲದೆ, ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

ಎಎಪಿ ಸರ್ಕಾರದ ಶಾಲಾ ಶಿಕ್ಷಣ ಮಾದರಿಯನ್ನು ಲಿಕ್ಕರ್ ಮಾಫಿಯಾಗೆ ಹೋಲಿಸಿದ ಅವರು, ಇದರ ಸಹಾಯದೊಂದಿಗೆ ಸರ್ಕಾರಿ ಶಾಲೆಗಳನ್ನು ಅರವಿಂದ್ ಕೇಜ್ರಿವಾಲ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Join Whatsapp